ಭಾರತ ಮತ್ತು ಜರ್ಮನಿ ನಡುವಿನ ಅಭಿವೃದ್ಧಿ ಸಹಕಾರ ಕುರಿತು ಜರ್ಮನಿ ಸಚಿವರ ಭಾರತ ಪ್ರವಾಸ – ಹಲವು ಒಪ್ಪಂದಗಳಿಗೆ ಇಂದು ಸಹಿ

ಚೀನಾ ರಷ್ಯಾದೊಂದಿಗೆ ಭಾರತದ ಸಂಬಂಧಗಳು ಹಾಗೂ ಭಾರತ ಮತ್ತು ಜರ್ಮನಿ ನಡುವಿನ ಅಭಿವೃದ್ಧಿ ಸಹಕಾರ ಕುರಿತು ಚರ್ಚೆ ನಡೆಸಲು ಜರ್ಮನಿಯ ವಿದೇಶಾಂಗ ಸಚಿವೆ ಅನ್ನಾಲೆನಾ ಬೇರ್ಬಾಕ್ ಎರಡು ದಿನಗಳ ಭೇಟಿಯಾಗಿ ಭಾರತಕ್ಕೆ ಆಗಮಿಸಿದ್ದು, ವಿದೇಶಾಂಗ ಸಚಿವ ಜೈಶಂಕರ್ ಜೊತೆಗೆ ಮಾತುಕತೆ ನಡೆಸಲಿದ್ದಾರೆ. ರಷ್ಯಾ-ಉಕ್ರೆನ್ ಸಂಘರ್ಷದ ಜಾಗತಿಕ ಪರಿಣಾಮಗಳು, ಗಾಲ್ವಾನ್ ಕಣಿವೆ ಘಟನೆಗಳು, ಚೀನಾದೊಂದಿಗೆ ಭಾರತದ ಸಂಬಂಧಗಳ ಕುರಿತು ಉಭಯ ದೇಶಗಳ ಸಚಿವರು ಚರ್ಚೆ ಮಾಡಲಿದ್ದಾರೆ. ಇದರಿಂದ ಪರಸ್ಪರ ದೇಶದ ಜನರು ಎರಡೂ ದೇಶಗಳಲ್ಲಿ ಅಧ್ಯಯನ, ಸಂಶೋಧನೆ ಹಾಗೂ ಉದ್ಯೋಗ ಮಾಡಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಭಾರತ ವಿಶ್ವದ ಇತರ ದೇಶಗಳಿಗೆ ಮಾದರಿಯಾಗಿದೆ. ಅಲ್ಲದೇ ಕಳೆದ 15 ವರ್ಷಗಳಲ್ಲಿ ಭಾರತವು 400 ಮಿಲಿಯನ್ ಜನರನ್ನು ಸಂಪೂರ್ಣ ಬಡತನದಿಂದ ಹೊರತರುವಲ್ಲಿ ಯಶಸ್ವಿಯಾಗಿದೆ.

Leave a Reply

Your email address will not be published. Required fields are marked *