ಭಾರತ ಹಾಗೂ ಅಫ್ಘಾನಿಸ್ತಾನದಲ್ಲಿ 5.9 ತೀವ್ರತೆಯ ಭೂಕಂಪನದ ಬೆನ್ನಲ್ಲೇ ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲೂ ಕಂಪನವಾಗಿದೆ. ನಿನ್ನೆ ರಾತ್ರಿ 7:26ರ ಸುಮಾರಿಗೆ ಪಾಕ್‍ನಲ್ಲಿ 5.8 ತೀವ್ರತೆಯ ಭೂಕಂಪನ ಸಂಭವಿಸಿದೆ.ಭೂಕಂಪನದಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ಏಕಾಏಕಿ ಭೂಮಿ ಕಂಪನಗೊಳ್ಳುತ್ತಿದ್ದಂತೆ ಜನ ಭಯಭೀತರಾಗಿದ್ದಾರೆ. ಬಳಿಕ ಭಾರತ ಹಾಗೂ ಅಫ್ಘಾನಿಸ್ತಾನದಲ್ಲೂ ಇದೇ ರೀತಿಯ ಭೂಕಂಪನವಾಗಿರುವ ಬಗ್ಗೆ ವರದಿಯಾಗಿದ್ದು, ಜಮ್ಮು ಮತ್ತು ಕಾಶ್ಮೀರ ದೆಹಲಿ ಹಾಗೂ ನೆರೆಯ ಎನ್‍ಸಿಆರ್ ಪ್ರದೇಶಗಳಲ್ಲಿ ಕಂಪನ ಉಂಟಾಗಿದೆ. ಪಾಕಿಸ್ತಾನದಲ್ಲಿ 2005ರಲ್ಲಿ ಸಂಭವಿಸಿದ ಭೂಕಂಪದಲ್ಲಿ ಸುಮಾರು 74 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು.