ಭೀಕರ ಭೂಕಂಪಕ್ಕೆ ತುತಾಗಿರುವ ಟರ್ಕಿಗೆ ಭಾರತವು ‘ಆಪರೇಶನ್‌ದೋಸ್ತ್’ ಕಾರ್ಯಾಚರಣೆ ಮೂಲಕ ಪರಿಹಾರ ಸಾಮಗ್ರಿಗಳನ್ನು ಕಳಿಸಿ ಮಾನವೀಯತೆ ಮೆರೆಯುತ್ತಿರುವ ಬಗ್ಗೆ ಭಾರತದಲ್ಲಿನ ಟರ್ಕಿ ರಾಯಭಾರಿ ಫಿರಟ್‌ಸುನೆಲ್‌ಧನ್ಯವಾದ ಅರ್ಪಿಸಿದ್ದಾರೆ. ಭಾರತ ನಮಗೆ ನೀಡುವ ಒಂದು ಹಾಸಿಗೆ, ಹೊದಿಕೆ ಹಾಗೂ ಡೇರೆಗಳು ನಮಗೆ ತುಂಬ ಮೌಲ್ಯಯುತವಾಗಿದೆ. ಅವಶೇಷಗಳಡಿ ಸಿಲುಕಿರುವ ನೂರು ಸಾವಿರಾರು ಜನರಿಗೆ ಇದು ಅತಿ ಮುಖ್ಯವಾಗಿದೆ ಎಂದು ಸುನೆಲ್‌ಟ್ವೀಟರ್‌ನಲ್ಲಿ ಧನ್ಯವಾದ ಹೇಳಿದ್ದಾರೆ. ಟರ್ಕಿ ಮತ್ತು ಸಿರಿಯಾಗಳಲ್ಲಿ ಸಂಭವಿಸಿದ 7.8 ತೀವ್ರತೆಯ ಭಾರೀ ಭೂಕಂಪಕ್ಕೆ ಈವರೆಗೆ ಮೃತಪಟ್ಟವರ ಸಂಖ್ಯೆ 35,224 ಕ್ಕೆ ಏರಿಕೆಯಾಗಿದೆ. ಈ ಪೈಕಿ ಟರ್ಕಿಯಲ್ಲಿ 31,643 ಹಾಗೂ ಸಿರಿಯಾದಲ್ಲಿ 3,581 ಜನರು ಸಾವನ್ನಪ್ಪಿದ್ದಾರೆ. 1939ರಲ್ಲಿ ಟರ್ಕಿಯಲ್ಲಿ ಸಂಭವಿಸಿದ ಭೂಕಂಪದಲ್ಲಿ 32,700 ಜನರು ಸಾವನ್ನಪ್ಪಿದ್ದರು. ಸಾವಿನ ಸಂಖ್ಯೆ ಏರುತ್ತಿರುವುದನ್ನು ನೋಡಿದರೆ, 1939ರ ಅಂಕಿ-ಅಂಶಗಳನ್ನು ಟರ್ಕಿ ಭೂಕಂಪ ಮೀರಿಸಬಹುದು ಎಂದು ವಿಶ್ಲೇಷಿಸಲಾಗಿದೆ.