ಭೀಕರ ಭೂಕಂಪದಿಂದ ಟರ್ಕಿ ಮತ್ತು ಸಿರಿಯಾ ಧ್ವಂಸಗೊಂಡಿವೆ. ವಿನಾಶದ ನಂತರ,
ಪ್ರಪಂಚದಾದ್ಯಂತದ 70ಕ್ಕೂ ಅಧಿಕ ದೇಶಗಳು ಟರ್ಕಿ ಹಾಗೂ ಸಿರಿಯಾದ ಸಹಾಯಕ್ಕೆ ಬಂದಿವೆ. ದೇಶಗಳು ಪರಿಹಾರ ಸಾಮಗ್ರಿಗಳು ಮತ್ತು ರಕ್ಷಣಾ ತಂಡಗಳನ್ನು ಟರ್ಕಿಗೆ ಕಳುಹಿಸುತ್ತಿವೆ. ‘ಆಪರೇಷನ್ ದೋಸ್ತ್’ ಅಡಿಯಲ್ಲಿ ಭಾರತವು ಎರಡೂ ದೇಶಗಳಿಗೆ ಸಹಾಯ ಮಾಡುತ್ತಿದೆ. ಈ ನಡುವೆ ಪಾಕಿಸ್ತಾನ ಕೂಡ ಈ ದುರಂತವನ್ನು ತನ್ನ ಅವಕಾಶವನ್ನಾಗಿ ಪರಿವರ್ತಿಸಿಕೊಳ್ಳಲು ಪ್ರಯತ್ನ ಮಾಡಿತ್ತಾದರೂ, ಸಾರ್ವಜನಿಕವಾಗಿ ಅವಮಾನಿತವಾಗಿದೆ. ಟರ್ಕಿಯಲ್ಲಿ ಸಂಭವಿಸಿದ ಭೂಕಂಪದ ವೇಳೆ ದೇಶದ ಜೊತೆಗೆ ತಾವಿದ್ದೇವೆ ಎನ್ನುವ ಒಗ್ಗಟ್ಟನ್ನು ತೋರಿಸಲು ಪಾಕ್‌ಪ್ರಧಾನಿ ಶೆಹಬಾಜ್‌ಷರೀಪ್‌ರಾಜಧಾನಿ ಅಂಕಾರಕ್ಕೆ ಭೇಟಿ ನೀಡುವುದಾಗಿ ಘೋಷಣೆ ಮಾಡಿದ್ದರು. ಆದರೆ, ಭೂಕಂಪ ಪೀಡಿತ ಟರ್ಕಿಯು ಶೆಹಬಾಜ್‌ಷರೀಫ್‌ಗೆ ಆತಿಥ್ಯ ನೀಡಲು ಸಾರ್ವಜನಿಕವಾಗಿ ನಿರಾಕರಿಸಿದೆ. ಇದು ಅಂತಾರಾಷ್ಟ್ರೀಯ ಹಾಗೂ ರಾಜತಾಂತ್ರಿಕ ಮಟ್ಟದಲ್ಲಿ ಪಾಕಿಸ್ತಾನದ ಮರ್ಯಾದೆ ಕಳೆಯುವಂತೆ ಮಾಡಿದೆ. ಟರ್ಕಿ ಆತಿಥ್ಯ ನಿರಾಕರಿಸಿದ ಬಳಿಕ ಶೆಹಬಾಜ್‌ಷರೀಪ್‌ಅವರು ಟರ್ಕಿ ಪ್ರವಾಸವನ್ನು ಮುಂದೂಡಿದರು. ಇಂಥ ಕಷ್ಟದ ಸಮಯದಲ್ಲಿ ಟರ್ಕಿ ತನ್ನ ದೇಶದ ನಾಗರಿಕರನ್ನು ಮಾತ್ರವೇ ಕಾಳಜಿ ವಹಿಸಲು ಬಯಸುತ್ತದೆ. ಹಾಗಾಗಿ ನೀವು ಪರಿಹಾರ ಸಿಬ್ಬಂದಿಗಳನ್ನು ಕಳಿಸೋದಿದ್ದರೆ ಮಾತ್ರವೇ ಕಳುಹಿಸಿ’ ಎಂದು ಟ್ವೀಟ್‌ನಲ್ಲಿ ಬರೆದಿದ್ದರು.