ಚಿಕ್ಕಮಗಳೂರಿನಲ್ಲಿ ವೃತ್ತಿಪರರು ಮತ್ತು ಚಿಂತಕರ ಸಭೆ, ಹಾಸನದಲ್ಲಿ ಬೂತ್ಮಟ್ಟದ ಸಭೆ ಹಾಗೂ ಬೇಲೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಭ್ರಷ್ಟಾಚಾರ, ಕಮಿಷನ್, ಒಡೆದು ಆಳುವ ನೀತಿ, ವೋಟ್ಬ್ಯಾಂಕ್ರಾಜಕೀಯ ಕಾಂಗ್ರೆಸ್ಪಕ್ಷದ ಟ್ರೇಡ್ಮಾರ್ಕ್ಗಳು ಎಂದು ಗಂಭೀರ ಆರೋಪ ಮಾಡಿದ್ದಾರೆ.ಕಾನೂನು ಮತ್ತು ಸುವ್ಯವಸ್ಥೆ ದೃಷ್ಟಿಯಿಂದ ಪಿಎಫ್ಐ ಸಂಘಟನೆಯನ್ನು ದೇಶದಲ್ಲೀಗ ಬ್ಯಾನ್ಮಾಡಲಾಗಿದೆ. ಆದರೆ, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಇದೇ ಪಿಎಫ್ಐ ಮೇಲಿದ್ದ ಸುಮಾರು 175 ಕೇಸನ್ನು ವಾಪಸ್ಪಡೆಯಲಾಯಿತು. ಇದು, ವೋಟ್ಬ್ಯಾಂಕ್ರಾಜಕಾರಣ ಅಲ್ವಾ ? ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಕಾಂಗ್ರೆಸ್ಸಿಗರು ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸಿದ್ದು ಏಕೆ? ಭ್ರಷ್ಟಾಚಾರದ ರೂವಾರಿಯೇ ಕಾಂಗ್ರೆಸ್ಎಂದು ನಡ್ಡಾ ಕಿಡಿಕಾರಿದರು.