ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಸದೆ ಸುಮಲತಾ ಅವರು, ನಾನು ಪಕ್ಷೇತರ ಸದಸ್ಯೆ. ಈ ಜಿಲ್ಲೆಯಲ್ಲಿ ಸಾಕಷ್ಟು ಯೋಜನೆಗಳನ್ನು ನಾನು ಜಾರಿಗೆ ತಂದಿದ್ದೇನೆ. ಈ ಯೋಜನೆ ಜಾರಿಗೆ ತರಲು ಕೇಂದ್ರ ಸರ್ಕಾರವೇ ಕಾರಣ. ಮಂಡ್ಯದ ಕಲುಷಿತ ರಾಜಕೀಯವನ್ನು ಸ್ವಚ್ಛಗೊಳಿಸಲು ನಾನು ನನ್ನ ಸಂಪೂರ್ಣ ಬೆಂಬಲವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ನೀಡುತ್ತೇನೆ. ನನ್ನ ನಿರ್ಧಾರದಲ್ಲಿ ರಿಸ್ಕ್ ಇರಬಹುದು. ಆದರೆ ಜನರ ಅಭಿವೃದ್ಧಿಮುಖ್ಯ. ಮೋದಿ ನೇತೃತ್ವದಲ್ಲಿ ದೇಶ ಅಭಿವೃದ್ಧಿಯಾಗುತ್ತಿದೆ. ನಾನು ಭಾರತೀಯ ಎಂದು ತಲೆ ಎತ್ತುವಂತೆ ಮೋದಿ ಮಾಡಿದ್ದಾರೆ. ಈ ಕಾರಣಕ್ಕೆ ನಾನು ರಿಸ್ಕ್‌ತೆಗೆದುಕೊಂಡು ನಿರ್ಧಾರ ಮಾಡಿದ್ದೇನೆ ಎಂದು ಅಧಿಕೃತವಾಗಿ ತಿಳಿಸಿದ್ದಾರೆ.
ಈ ವೇಳೆ ಬಿಜೆಪಿ ಸೇರುತ್ತೀರಾ ಎಂಬ ಪ್ರಶ್ನೆಗೆ, ನಾನು ಪಕ್ಷೇತರ ಸದಸ್ಯೆ ಆಗಿದ್ದೇನೆ. ಪಕ್ಷೇತರ ಸದಸ್ಯರು ಜಯಗಳಿಸಿದ 6 ತಿಂಗಳ ಒಳಗಡೆ ಸೇರಿದರೆ ಮಾತ್ರ ಅದು ಮಾನ್ಯವಾಗುತ್ತದೆ. ಈ ಕಾನೂನು ಸಮಸ್ಯೆ ಇರುವ ಕಾರಣ ನಾನು ಈಗ ಬಿಜೆಪಿ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.