ವಿರೂಪಾಕ್ಷಪ್ಪ ಪುತ್ರನ ಲಂಚ ಪ್ರಕರಣ ಸಂಬಂಧ ಮಂಡ್ಯದ ಹುಲಿಕೆರೆಯಲ್ಲಿ ಮಾತನಾಡಿದ ಸಚಿವ ಮಾಧುಸ್ವಾಮಿ, ನಾವು ಅದರ ಬಗ್ಗೆ ಕಮೆಂಟ್ ಮಾಡೊಕೆ ಅಗಲ್ಲ. ಶಾಸಕರು ಯಾಕೆ ರಾಜೀನಾಮೆ ಕೊಡಬೇಕು. ವಿರೂಪಾಕ್ಷಪ್ಪನ ಮಗ ಭ್ರಷ್ಟಾಚಾರ ನಿಗ್ರಹ ದಳ ಯಲ್ಲಿ ಒಬ್ಬ ಆಫೀಸರ್. ಅವನು ಲಂಚ ತೆಗೆದುಕೊಂಡರೆ ವಿರೂಪಾಕ್ಷಪ್ಪ ಏನು ಮಾಡ್ತಾರೆ. ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಯಾಕೆ ಬರೆ ಹಾಕಬೇಕು. ಶಾಸಕರ ಮಗ ಮಾಡಿದ್ದಕ್ಕೆ ಸಿಎಂ ಯಾಕೆ ರಾಜೀನಾಮೆ ಕೊಡಬೇಕು. ಇಂತಹ ಅಯೋಗ್ಯರು ಯಾರ್ ಯಾರು ಇದ್ದಾರೆ ಎಂದು ನಾವು ಹುಡುಕಿಕೊಂಡು ಕೂರೋಕೆ ಆಗುತ್ತಾ ಕಾಂಗ್ರೆಸ್‍ನವರಿಗೆ ಏನೂ ಇಲ್ಲ, ಏನಾದ್ರು ಸಿಕ್ಕಿದರೆ ದೊಡ್ಡದು ಮಾಡಿಕೊಂಡು ಹೋಗ್ತಾರೆ ಎಂದು ಹೇಳಿದರು.