ಜೂನ್23 ರಂದು ಬಿಹಾರದ ಪಾಟ್ನಾದಲ್ಲಿ ವಿರೋಧ ಪಕ್ಷಗಳ ಜಂಟಿ ಸಭೆ ನಡೆದಿತ್ತು. ಆ ಬಳಿಕ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್‌ಯಾದವ್, ಕಾಂಗ್ರೆಸ್‌ನಾಯಕ ರಾಹುಲ್‌ಗಾಂಧಿ ಜೊತೆ ತಮಾಷೆಯ ಮಾತುಕತೆ ನಡೆಸಿದ್ದರು. ಗಡ್ಡವನ್ನು ಬೋಳಿಸಿಕೊಂಡು, ಆದಷ್ಟು ಬೇಗ ಮದುವೆಯಾಗುವಂತೆ ಅವರು ಸಲಹೆ ನೀಡಿದ್ದರು. ನೀವು ಈಗಾಗಲೇ ಮದುವೆಯಾಗಬೇಕಿತ್ತು. ಈಗಲೂ ಕೂಡ ನಿಮಗೆ ಸಮಯವಿದೆ. ಇದಕ್ಕೆ ಅಲ್ಲಿಯೇ ಪ್ರತಿಕ್ರಿಯೆ ನೀಡಿದ್ದ ರಾಹುಲ್‌ಗಾಂಧಿ ಈಗ ನೀವು ಹೇಳಿದ್ದೀರಿ ಎಂದಾದಲ್ಲಿ, ಅದು ಆಗಿಯೇ ಆಗುತ್ತದೆ ಎಂದಿದ್ದರು. ದೇಶದ ಯಾವುದೇ ಪ್ರಧಾನಿ ಕೂಡ ಪತ್ನಿ ಇಲ್ಲದೇ ಇಲ್ಲ. ಪ್ರತಿಪಕ್ಷಗಳಿಂದ ಪ್ರಧಾನಮಂತ್ರಿಯ ಫೇಸ್‌ಯಾರಾಗಲಿದ್ದಾರೆ ಎಂದು ಸುದ್ದಿಗಾರರ ಪ್ರಶ್ನೆಗೆ ಮಾತನಾಡುವ ವೇಳೆ ಲಾಲು ಪ್ರಸಾದ್‌ಯಾದವ್‌ಈ ಮಾತು ಹೇಳಿದ್ದಾರೆ. ಈ ವೇಳೆ ರಾಹುಲ್‌ಗಾಂಧಿಗೆ ಆದಷ್ಟು ಶೀಘ್ರವಾಗಿ ಮದುವೆಯಾಗುವಂತೆ ಹೇಳಿದ ಸಲಹೆಯನ್ನು ನೆನಪಿಸಿದರು. ಪತ್ನಿ ಇಲ್ಲದೆ ಪ್ರಧಾನಮಂತ್ರಿಯ ಅಧಿಕೃತ ನಿವಾಸದಲ್ಲಿ ಇರುವುದು ತಪ್ಪು. ಯಾರೆಲ್ಲಾ ಪ್ರಧಾನಿಯಾಗ್ತಾರೋ ಅವರು ಪತ್ನಿ ಇಲ್ಲದೆ ಇರಬಾರದು. ಪತ್ನಿ ಇಲ್ಲದೆ ಪ್ರಧಾನಮಂತ್ರಿ ಕಚೇರಿಯಲ್ಲಿ ಇರುವುದು ತಪ್ಪು. ಇದನ್ನು ಯಾವುದೇ ಕಾರಣಕ್ಕೂ ಮಾಡಲಾರದು ಎಂದು ಬಿಜಾರ ಮಾಜಿ ಮುಖ್ಯಮಂತ್ರಿ ಹೇಳಿದ್ದಾರೆ. ಆ ಮೂಲಕ ಹಾಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನೂ ಕೆಣಕಿದ್ದಾರೆ.