ಚುನಾವಣೆ ಸಮಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದಾರೆ ನಟ ರಿಷಬ್ ಶೆಟ್ಟಿ ಈ ಭೇಟಿಯ ಹಿಂದೆ ಮಹತ್ವದ ಉದ್ದೇಶವಿತ್ತು ಎನ್ನುವುದನ್ನೂ ಅವರು ಹೇಳಿಕೊಂಡಿದ್ದಾರೆ. ತಾವು ಕೊಟ್ಟಿರುವ ಮನವಿಗೂ ಬಸವರಾಜ ಬೊಮ್ಮಾಯಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದೂ ಅವರು ವಿಡಿಯೋ ಮೂಲಕ ಹೇಳಿದ್ದಾರೆ. ಕಾಂತಾರ ಚಿತ್ರದ ನಂತರ ಅವರು ಅನೇಕ ಕಾಡುಗಳಿಗೆ ಭೇಟಿ ನೀಡಿದ್ದಾರಂತೆ. ಕಾಡಿನ ಪಕ್ಕದಲ್ಲೇ ವಾಸಿಸುವ ಅನೇಕರಿಗೆ ಏನೆಲ್ಲ ಕಷ್ಟ ಪಡುತ್ತಿದ್ದಾರೆ, ಅವರಿಗೆ ಏನೆಲ್ಲ ಪರಿಹಾರ ನೀಡಬಹುದು ಹಾಗೂ ಕಾಡು ಪ್ರಾಣಿಗಳಿಂದ ಯಾವ ರೀತಿಯಲ್ಲಿ ತೊಂದರೆ ಆಗುತ್ತಿದೆ ಮತ್ತು ಅರಣ್ಯ ಸಿಬ್ಬಂದಿ ಎಷ್ಟೆಲ್ಲ ಸಂಕಟಗಳನ್ನು ಅನುಭವಿಸುತ್ತಿದ್ದಾರೆ ಎನ್ನುವುದನ್ನು ಅಕ್ಷರ ರೂಪದಲ್ಲಿ ಮುಖ್ಯಮಂತ್ರಿಗಳಿಗೆ ತೋರಿಸಿದ್ದಾರೆ. ಸಿಎಂ ಕೂಡ ಕೂಡಲೇ ಅವುಗಳಿಗೆ ಸ್ಪಂದಿಸುವುದಾಗಿ ತಿಳಿಸಿದ್ದಾರಂತೆ.