ಮಹಿಳೆಯರ ವಿರೋಧಿ ಅಂತಾ ಗುರುತಿಸಿಕೊಂಡಿರುವ ತಾಲಿಬಾನಿ ಸರ್ಕಾರ ವಿಚಿತ್ರ ರೂಲ್ಸ್ ಜಾರಿಗೆ ತರುತ್ತಿದೆ. ತಾಲಿಬಾನ್‌ಸರ್ಕಾರ ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಸ್ವಾತಂತ್ರ್ಯ ಕಿತ್ತುಕೊಂಡಿದೆ. ಇವರಿಂದಾಗಿ ಅಫ್ಘಾನಿಸ್ತಾನದ ಜನರಿಗೆ ನೆಮ್ಮದಿಯೇ ಇಲ್ಲ. ಅದರಲ್ಲೂ ಮಹಿಳೆಯರು ನೆಮ್ಮದಿಯಾಗಿ, ಸ್ವಾತಂತ್ರ್ಯದಿಂದ ಹೊರಗೆ ಹೋಗಲು ಆಗುತ್ತಿಲ್ಲ. ಇದರ ಜೊತೆ ಅಪ್ರಾಪ್ತ ಹೆಣ್ಣು ಮಕ್ಕಳಿಗೂ ಶಿಕ್ಷಣ ಕೊಡಲು ಬಿಡುತ್ತಿಲ್ಲ ಕನಿಷ್ಠ ಶಿಕ್ಷಣ ಪಡೆಯಲು ಕೂಡ ಆಗುತ್ತಿಲ್ಲ. ಸರಿ ಅಫ್ಘಾನಿಸ್ತಾನದಲ್ಲಿ ಶಿಕ್ಷಣ ಸಿಗಲ್ಲ, ಬೇರೆ ದೇಶಕ್ಕಾದರೂ ಹೋಗಿ ಶಿಕ್ಷಣ ಪಡೆಯೋಣ ಅಂದ್ರೆ ಹೆಣ್ಣು ಮಕ್ಕಳಿಗೇ ಟಾರ್ಚರ್ ಕೊಟ್ಟ ಆರೋಪ ಈಗ ಕೇಳಿಬಂದಿದೆ. ಅಷ್ಟಕ್ಕೂ ಅವರೆಲ್ಲಾ ಸಾವಿರ ಸಾವಿರ ಕನಸು ಕಂಡು, ತಮ್ಮ ಲಗೇಜ್ ಪ್ಯಾಕ್ ಮಾಡಿದ್ರು. ಹೀಗೆ ಇನ್ನೇನು ವಿದೇಶಕ್ಕೆ ಹೋಗಿ ತಮ್ಮ ಹೊಸ ಬಾಳು ಶುರು ಮಾಡಬೇಕು ಅಂತಿದ್ದರು. ಆದರೆ ವಿದೇಶಕ್ಕೆ ಹೋಗಲು ವಿಮಾನ ಹತ್ತಲು ಬಂದ ಅವರನ್ನು ತಾಲಿಬಾನಿಗಳ ಗ್ಯಾಂಗ್ ಅಡ್ಡ ಹಾಕಿ. ಹೆಣ್ಣು ಮಕ್ಕಳನ್ನ ವಾಪಸ್ ಮನೆಗೆ ಕಳಿಸಿ, ಬೇರೆ ದೇಶಕ್ಕೆ ಹೋಗಿ ನೀವು ಓದುವಂತೆ ಇಲ್ಲ ಎಂದು ಆದೇಶ ನೀಡಿದೆ. ಈಗಾಗಲೇ ತನ್ನ ದೇಶದಲ್ಲಿ ತಾಲಿಬಾನಿ ಗ್ಯಾಂಗ್ ವಿಶ್ವ ವಿದ್ಯಾಲಯಗಳನ್ನೇ ಬಂದ್ ಮಾಡಿದೆ. ಈ ಹೊತ್ತಲ್ಲಿ ಹೊರ ದೇಶಕ್ಕೆ ಹೋಗಿ ಓದಲು ಕೂಡ ಅವಕಾಶ ನೀಡುತ್ತಿಲ್ಲ.