ಉತ್ತರ ಪ್ರದೇಶದಲ್ಲಿ ಸತತ ಎನ್‌ಕೌಂಟರ್ ಮೂಲಕ ಗ್ಯಾಂಗ್‌ಸ್ಟರ್, ಮಾಫಿಯಾ ಡಾನ್‌ಗಳನ್ನು ಮಟ್ಟಹಾಕುವ ಪ್ರಯತ್ನ ಗ್ಯಾಂಗ್‌ಸ್ಟರ್ ಅತೀಕ್ ಅಹಮ್ಮದ್ ಹಾಗೂ ಸಹೋದರ ಅಶ್ರಫ್ ಪೊಲೀಸ್ ಕಸ್ಟಡಿಯಲ್ಲೇ ಹತ್ಯೆಯಾದ ಬಳಿಕ ಉತ್ತರ ಪ್ರದೇಶದ ಕಾನೂನು ಸುವ್ಯವಸ್ಥೆ ಮತ್ತೆ ಚರ್ಚೆಯಲ್ಲಿದೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈಗಾಗಲೇ ಖಡಕ್ ಸೂಚನೆ ನೀಡಿದ್ದಾರೆ. ಉತ್ತರ ಪ್ರದೇಶದಲ್ಲಿ ಮಾಫಿಯಾ, ಗ್ಯಾಂಗ್‌ಸ್ಟರ್ಸ್, ಕ್ರಿಮಿನಲ್ಸ್ ಸಂಪೂರ್ಣವಾಗಿ ಮಟ್ಟಹಾಕುವುದಾಗಿ ಈಗಾಗಲೇ ಯೋಗಿ ಭರವಸೆ ನೀಡಿದ್ದಾರೆ. ಇದರಂತೆ ಉಮೇಶ್ ಪಾಲ್ ಕೊಲೆ ಪ್ರಕರಣದ ಪ್ರಮುಖ 8 ಆರೋಪಿಗಳ ಪೈಕಿ ಈಗಾಗಲೇ 6 ಮಂದಿಯನ್ನು ಎನ್‌ಕೌಂಟರ್ ಮಾಡಿರುವ ಯೋಗಿ ಆದಿತ್ಯನಾಥ್ ಸರ್ಕಾರ ಇದೀಗ ಮತ್ತೊಂದು ಎಚ್ಚರಿಕೆ ನೀಡಿದೆ. ಇದರ ಹೊರತಾಗಿ ಯಾರಾದರೂ ಕ್ರಿಮಿನಲ್ಸ್, ಮಾಫಿಯಾ ಡಾನ್‌ಗಳು, ಗ್ಯಾಂಗ್‌ಸ್ಟರ್ಸ್ ಬೆದರಿಕೆ ಹಾಕುವುದು, ವಸೂಲಿ ಮಾಡುವುದು, ದರೋಡೆ ಮಾಡಲು ಇಳಿದರೆ ಕ್ರಿಮಿನಲ್ಸ್‌ಗಳು ಅಟ್ಟಹಾಸ ಮೆರೆಯಲು ಆರಂಭಿಸಿದರೆ ಅಷ್ಟೇ ಎನ್‌ಕೌಂಟರ್ ಮಾಡಿ ಮುಗಿಸುತ್ತೇವೆ. ಎಂದು ಯೋಗಿ ಆದಿತ್ಯನಾಥ್ ವಾರ್ನಿಂಗ್ ನೀಡಿದ್ದಾರೆ.