ಮುಂದಿನ ಎರಡು ವರ್ಷಗಳಲ್ಲಿ ಕರ್ನಾಟಕ ಒಂದು ಟ್ರಿಲಿಯನ್ ಆರ್ಥಿಕತೆ ಹೊಂದಲಿದೆ : ಅಮಿತಾಬ್ ಕಾಂತ್

ಖಾಸಗಿ ಕಾರ್ಯಕ್ರಮವೊಂದರಲ್ಲಿ ದಕ್ಷಿಣ ಭಾರತದ ಆರ್ಥಿಕತೆ ಬಗ್ಗೆ ಮಾತನಾಡಿದ ನೀತಿ ಆಯೋಗದ ಮಾಜಿ ಸಿಇಒ ಅಮಿತಾಭ್ ಕಾಂತ್ ಅವರು, ಭಾರತದ ಆರ್ಥಿಕತೆಗೆ ಭವಿಷ್ಯದಲ್ಲಿ ದಕ್ಷಿಣ ಭಾರತ ದ ರಾಜ್ಯಗಳು ದೊಡ್ಡ ಕೊಡುಗೆ ಕೊಡಲಿವೆ ಎಂದು ಪ್ರತಿಪಾದಿಸಿದರು. ಮುಂದಿನ ಎರಡು ವರ್ಷದಲ್ಲಿ ಕರ್ನಾಟಕವು 1 ಟ್ರಿಲಿಯನ್ ಡಾಲರ್ (1 ಲಕ್ಷ ಕೋಟಿ) ಆರ್ಥಿಕತೆಯಾಗಲಿದ್ದು, ತೆಲಂಗಾಣ ವೂ ಈ ಸಾಲಿನಲ್ಲಿ ಸೇರಬಹುದು. ಭಾರತ ಸದ್ಯ 5 ಟ್ರಿಲಿಯನ್ ಡಾಲರ್ ಗುರಿ ಹೊಂದಿದೆ. ಇದು 10 ಟ್ರಿಲಿಯನ್ ಡಾಲರ್ ಗೆ ತಲುಪಿದಾಗ ಭಾರತವನ್ನು ದಕ್ಷಿಣ ಭಾರತದ ರಾಜ್ಯಗಳು ಮುನ್ನಡೆಸುತ್ತವೆ ಎಂದು ಅವರು ಹೇಳಿದರು.

Leave a Reply

Your email address will not be published. Required fields are marked *