ನಡೆಯುತ್ತಿರುವ ಶೃಂಗಸಭೆಯಲ್ಲಿ ಮಾತನಾಡಿದ ಖ್ಯಾತ ಆರ್ಥಿಕ ತಜ್ಞ ಮಾರ್ಟಿನ್‌ವೋಲ್ಫ್ ‘ಭಾರತದ ಆರ್ಥಿಕತೆಯನ್ನು ನಾನು 70ರ ದಶಕದಿಂದಲೂ ಗಮನಿಸುತ್ತಾ ಬಂದಿದ್ದೇನೆ. ನನ್ನ ಅಭಿಪ್ರಾಯದಲ್ಲಿ ಮುಂದಿನ 10-20 ವರ್ಷಗಳ ಕಾಲ ಭಾರತ ವಿಶ್ವದಲ್ಲೇ ಅತ್ಯಂತ ವೇಗವಾದ ಆರ್ಥಿಕ ಪ್ರಗತಿ ಸಾಧಿಸುವ ದೇಶವಾಗಿ ಹೊರಹೊಮ್ಮಲಿದೆ ಇದು ಖಚಿತ’ ಎಂದು ಹೇಳಿದ್ದಾರೆ. ಇದುವರೆಗೆ ಭಾರತದಲ್ಲಿ ಯಾರು ಉದ್ಯಮ ಹೊಂದಿಲ್ಲವೋ ಮತ್ತು ಮುಂದಿನ ದಿನಗಳಲ್ಲಿ ಭಾರತವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ. ಭಾರತದ ಬೆಳವಣಿಗೆ ಅಸಾಧಾರಣವಾಗಿರಲಿದೆ. ಈ ವಿಷಯ ಬಹುತೇಕರಿಗೆ ಗೊತ್ತಾಗಿರಬಹುದು. ಆದರೂ ಈ ವೇದಿಕೆಯಲ್ಲಿ ನಾನು ಮತ್ತೊಮ್ಮೆ ಆ ವಿಷಯವನ್ನು ಪ್ರಸ್ತಾಪಿಸ ಬಯಸುತ್ತೇನೆ ಎಂದು ಹೇಳಿದ್ದಾರೆ.