ಕ್ರಿಸ್ಮಸ್ ಮತ್ತು ಹೊಸ ವರ್ಷಚಾರಣೆಗೆ ಇನ್ನು ಕೆಲವು ವಾರಗಳು ಬಾಕಿ ಇರುವಾಗಲೇ ಮುಂಬೈನಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಭಯೋತ್ಪಾದಕ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಪೊಲೀಸರು ಜನವರಿ 2ರ ವರೆಗೂ ಕರ್ಫ್ಯೂ ವಿಧಿಸಿದ್ದು, 5 ಕ್ಕಿಂತ ಹೆಚ್ಚು ಮಂದಿ ಒಟ್ಟಾಗಿ ಓಡಾಡುವಂತಿಲ್ಲ ಮದುವೆ ಸಮಾರಂಭಗಳು, ಸಭೆಗಳು, ಧ್ವನಿವರ್ಧಕಗಳು, ವಾದ್ಯಗಳು, ಬ್ಯಾಂಡ್‌ಗಳನ್ನು ನುಡಿಸುವಂತಿಲ್ಲ, ಪಟಾಕಿ ಹೊಡೆಯುವಂತಿಲ್ಲ ಮುಂಬೈ ಪೊಲೀಸ್ ಕೇಂದ್ರ ಕಚೇರಿಯಿಂದ ಈ ಆದೇಶ ಪ್ರಕಟಗೊಂಡಿದ್ದು, ಜನವರಿ 2ರ ವರೆಗೂ ಶಸ್ತ್ರಾಸ್ತ್ರಗಳು, ಬಂದೂಕುಗಳು, ಕತ್ತಿಗಳು ಮತ್ತು ಇತರ ಆಯುಧಗಳೊಂದಿಗೆ ಸಂಚಾರದ ಮೇಲೂ ನಿಷೇಧವನ್ನು ವಿಧಿಸಲಾಗಿದೆ.