ಕರ್ನಾಟಕದ 865 ಹಳ್ಳಿಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು. ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶ ಮಾಡಿ’ ಎಂಬ ಮಹಾರಾಷ್ಟ್ರದ ಒತ್ತಾಯಕ್ಕೆ ಪ್ರತಿಯಾಗಿ, ‘ಮುಂಬೈ ನಗರವನ್ನು ಕೇಂದ್ರಾಡಳಿತ ಮಾಡಿ’ ಎಂದು ಕೆಲವು ಕನ್ನಡಿಗ ರಾಜಕಾರಣಿಗಳು ಮಾಡಿದ ಆಗ್ರಹಕ್ಕೆ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಮುಂಬೈ ಯಾವತ್ತೂ ಮಹಾರಾಷ್ಟ್ರದ ಅವಿಭಾಜ್ಯ ಅಂಗ. ಮುಂಬೈ ಯಾರಪ್ಪನದೂ ಅಲ್ಲ. ಅದರ ಮೇಲೆ ಯಾರೂ ಹಕ್ಕು ಸಾಧಿಸಲು ಆಗದು’ ಎಂದು ಹೇಳಿದ್ದಾರೆ.