ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಮುರುಘಾ ಶ್ರೀಗಳು ಅಜ್ಞಾತ ಸ್ಥಳದಿಂದ ಮಠಕ್ಕೆ ಆಗಮಿಸುತ್ತಿದ್ದಂತೆಯೇ ಭಕ್ತರು ಶ್ರೀಗಳ ಪರ ಘೋಷಣೆ ಕೂಗಿದ್ದಾರೆ. ಶ್ರೀಗಳು ಮಠದ ಆವರಣದಲ್ಲಿ ಭಕ್ತರನ್ನುದ್ದೇಶಿಸಿ ಮಾತನಾಡಿ, ಬಂದಿರುವ ಸಂದರ್ಭವನ್ನು ಧೈರ್ಯವಾಗಿ ಎದುರಿಸುತ್ತೇನೆ. ಸಮಸ್ಯೆ ನಿವಾರಣೆ ಮಾಡುವ ಪ್ರಯತ್ನ ಮಾಡುತ್ತೇನೆ. ಇದು ಸಂಕಷ್ಟದ ಸಮಯವಾಗಿದೆ. ಯಾರಿಗೂ ಆತಂಕ ಬೇಡ. ಎಲ್ಲರೂ ಧೈರ್ಯ ಸಹನೆಯಿಂದ ಇರಿ. ಈ ವಿಚಾರದಲ್ಲಿ ಯಾವುದೇ ಪಲಾಯನವಾದವಿಲ್ಲ. ಮಠದ ಒಳಗೆ ನಡೆಯುತ್ತಿದ್ದ ಪಿತೂರಿ ಈಗ ಹೊರಗೆ ಬಂದಿದೆ. ಕಾನೂನನ್ನು ಗೌರವಿಸಬೇಕು. ಇಂತಹ ಸಂದರ್ಭಗಳು ಇದೇ ಮೊದಲೇನು ಅಲ್ಲ. ಹೀಗಾಗಿ ಯಾವುದೇ ಗಾಳಿ ಸುದ್ದಿಗಳಿಗೆ ಕಿವಿಗೊಡಬೇಡಿ ಎಂದು ಶ್ರೀಗಳು ತಿಳಿಸಿದರು.