ಮುಸ್ಲಿಮರಿಗೆ ನೀಡಲಾಗಿದ್ದ 4% ಒಬಿಸಿ ಮೀಸಲಾತಿ ರದ್ದು ಪ್ರಕರಣ ರಾಜಕೀಯ ಹೇಳಿಕೆ ಗಳಿಗೆ ಸುಪ್ರೀಂ ಕೋರ್ಟ್ ಕಿಡಿ

ಮುಸ್ಲಿಮರಿಗೆ ನೀಡಲಾಗಿದ್ದ 4% ಒಬಿಸಿ ಮೀಸಲಾತಿ ರದ್ದು ಪಡಿಸಿರುವ ಸರ್ಕಾರದ ಆದೇಶದ ಕುರಿತು ರಾಜಕೀಯ ಹೇಳಿಕೆಗಳನ್ನು ಸುಪ್ರೀಂ ಕೋರ್ಟ್ ಗಂಭೀರವಾಗಿ ಪರಿಗಣಿಸಿದೆ. ಕರ್ನಾಟಕ ಸರ್ಕಾರ ಆದೇಶವನ್ನು ನ್ಯಾ. ಕೆಎಂ ಜೋಸೆಫ್‌, ಬಿವಿ ನಾಗರತ್ನ, ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿತು.ಈ ವೇಳೆ ನ್ಯಾಯಾಂಗದ ವಿಷಯಗಳ ಬಗ್ಗೆ ಸಾರ್ವಜನಿಕ ಹೇಳಿಕೆಗಳನ್ನು ನೀಡಬಾರದು. ರಾಜಕೀಯಕ್ಕೂ ಅದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ. ಅಲ್ಲದೇ ಅರ್ಜಿ ವಿಚಾರಣೆಯನ್ನು ಜುಲೈ 25ಕ್ಕೆ ಮುಂದೂಡಿದ ಕೋರ್ಟ್‌ ಮುಂದಿನ ಆದೇಶದವರೆಗೂ ಹಳೆಯ ಮೀಸಲಾತಿಯನ್ನು ಮುಂದುವರಿಸುವಂತೆ ಆದೇಶಿಸಿದೆ. ಅರ್ಜಿದಾರರ ಪರ ವಕೀಲ ದುಶ್ಯಂತ್ ದವೆ, ಪ್ರತಿ ದಿನ ಗೃಹ ಸಚಿವ ಅಮಿತ್ ಶಾ ಅವರು ಮೀಸಲಾತಿ ರದ್ದುಗೊಳಿಸಿದ್ದರ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತಿದ್ದಾರೆ. ಎಂದು ನ್ಯಾಯಾಲಯದ ಗಮನಕ್ಕೆ ತಂದರು.ಈ ವೇಳೆ ಸಾಲಿಸಿಟರ್‌ಜನರಲ್‌ತುಷಾರ್‌ಮೆಹ್ತಾ, ಧರ್ಮದ ಆಧಾರದಲ್ಲಿ ನೀಡುವ ಮೀಸಲಾತಿಯನ್ನು ಯಾರು ವಿರೋಧಿಸುತ್ತಾರೋ ಅವರು ಸಮರ್ಥಿಸಿಕೊಳ್ಳುತ್ತಾರೆ ಎಂದು ವಾದಿಸಿದರು. ಈ ವೇಳೆ ನ್ಯಾಯಮೂರ್ತಿ ಬಿವಿ ನಾಗರತ್ನ, ಪ್ರಕರಣ ನ್ಯಾಯಾಲಯದಲ್ಲಿರುವಾಗ ಸರ್ಕಾರದ ವ್ಯಕ್ತಿಗಳು ಯಾವುದೇ ಹೇಳಿಕೆ ನೀಡಬಾರದು. ಮಾತನಾಡುವಾಗ ಜಾಗೃತೆವಹಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಸೆಂಟ್ರಲ್ ಮುಸ್ಲಿಂ ಅಸೋಸಿಯೇಷನ್ ಪರವಾಗಿ ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್ ಅವರು ಮೀಸಲಾತಿ ರದ್ದಿಗೆ ಸಂಬಂಧಿಸಿದ ಭಾಷಣಗಳ ಸುದ್ದಿಯನ್ನು ಪ್ರಕಟಿಸದಂತೆ ಮಾಧ್ಯಮಗಳನ್ನು ನಿರ್ಬಂಧಿಸುವಂತೆ ಮನವಿ ಮಾಡಿದರು. ಆದರ ಮನವಿಯನ್ನು ಪೀಠ ಪುರಸ್ಕರಿಸಲಿಲ್ಲ.

Leave a Reply

Your email address will not be published. Required fields are marked *