ಮೆಟ್ರೋ ಪಿಲ್ಲರ್‌ಉರುಳಿ ತಾಯಿ- ಮಗು ದುರ್ಮರಣ

ಮೆಟ್ರೊ 2 ನೇ ಹಂತದ ಕಾಮಗಾರಿ ನಡೆಯುತ್ತಿದ್ದ ನಾಗವಾರ ಗೊಟ್ಟಿಗೆರೆ ಮಾರ್ಗದ ಹೆಣ್ಣೂರು ಮುಖ್ಯ ರಸ್ತೆ ಎಚ್‌ಬಿಆರ್‌ಲೇಔಟ್‌ಬಳಿ ಮೆಟ್ರೋ ಕಾಮಗಾರಿ ನಡೆಯುತ್ತಿತ್ತು. ಪಿಲ್ಲರ್‌ಕುಸಿದು ತಾಯಿ – ಮಗು‌ಮೃತಪಟ್ಟಿದ್ದಾರೆ.23 ವರ್ಷದ ತೇಜಸ್ವಿನಿ ಮತ್ತು ಅವರ ಎರಡೂವರೆ ವರ್ಷದ ಕಂದಮ್ಮ ಈ ದುರಂತದಲ್ಲಿ ಮೃತ ಪಟ್ಟಿದೆ ಎಂದು ವರದಿಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ “ಮೆಟ್ರೋ ಪಿಲ್ಲರ್ ಅಪಘಾತಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಮಾಹಿತಿ ಕೇಳಿದ್ದೇನೆ. ನನಗೆ ಈಗಷ್ಟೇ ಸುದ್ದಿ ತಿಳಿದಿದೆ. ಈ ಬಗ್ಗೆ ಅಧಿಕಾರಿಗಳಿಂದ ಸಂಪೂರ್ಣ ವಿವರ ಕೇಳಿದ್ದೇನೆ. ಶೀಘ್ರದಲ್ಲೇ ಸಂತ್ರಸ್ತರಿಗೆ ಪರಿಹಾರವನ್ನು ಘೋಷಿಸುತ್ತೇವೆ” ಎಂದಿದ್ದಾರೆ.

Leave a Reply

Your email address will not be published. Required fields are marked *