ನಾಗಾವರದ ಮೆಟ್ರೋ ಪಿಲ್ಲರ್ ದುರಂತ ಬಿಎಂಆರ್‌ಸಿಎಲ್‌ವಿರುದ್ಧ ಜನಾಕ್ರೋಶ ವ್ಯಕ್ತವಾಗುತ್ತಿದೆ. ತಾಯಿ ಮಗು ಸಾವು ಕರುಳು ಹಿಡುವಂತಿದೆ. ಹೀಗಾಗಿ ಬಿಎಂಆರ್‌ಸಿಎಲ್‌ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ಗೆ ಮನವಿ ಪತ್ರ ಕಳುಹಿಸಿದ್ದು, ಘಟನೆಗೆ ಕಾರಣ ಏನು ಎಂದು ತನಿಖೆ ಮಾಡಿ ವರದಿ ನೀಡುವಂತೆ ಮನವಿ ಮಾಡಿಕೊಂಡಿದೆ. 40% ಕಮಿಷನ್‍ಪರಿಣಾಮ ಹೀಗೆ ಆಗಿದೆ ಅಂತಾ ಆರೋಪ ಕೂಡ ವ್ಯಕ್ತವಾಗುತ್ತಿದೆ. ಈಗಾಗಲೇ ಕೆಳ ಹಂತದ ಅಧಿಕಾರಿ ವೆಂಕಟೇಶ್ ವಿರುದ್ಧ ಕ್ರಮ ಜರುಗಿಸಲಾಗಿದೆ. ಕಾಮಗಾರಿಗೆ ಬಳಸಿರೋ ವಸ್ತುಗಳು, ಸರಕುಗಳು ಕಳಪೆ ಗುಣಮಟ್ಟದ್ದು ಅಂತಾ ವರದಿಯಾದ್ರೆ ಮತ್ತಷ್ಟು ಅಧಿಕಾರಿಗ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಬಿಎಂಆರ್‌ಸಿಎಲ್‌ಎಂಡಿ ಅಜುಂ ಪರ್ವೇಜ್ ಮಾಹಿತಿ ನೀಡಿದ್ದಾರೆ. ಮೆಟ್ರೋ ಪಿಲ್ಲರ್ ದುರಂತದ ಬಗ್ಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಕ್ಕೆ ಇಂದು ಸಂಜೆಯೇ ವರದಿ ನೀಡಲಿರುವ ಬಿಎಂಆರ್‌ಸಿಎಲ್, ಘಟನೆ ಹೇಗಾಯ್ತು? ಕಾರಣ ಏನು? ತೆಗೆದುಕೊಂಡಿರುವ ಕ್ರಮಗಳೇನು ಅಂತಾ ವರದಿ ಸಲ್ಲಿಸಲಿದೆ.