ಮೈಸೂರಿನ ಮೋದಿ ಕಾರ್ಯಕ್ರಮಕ್ಕೆ ಎರಡು ಡೋಸ್ ಸರ್ಟಿಫಿಕೇಟ್ ಸಾಕು. ಬೆಂಗಳೂರಿನ ಮೋದಿ ಕಾರ್ಯಕ್ರಮಕ್ಕೆ ಕೋವಿಡ್ ಟೆಸ್ಟ್ ಕಡ್ಡಾಯ ಎಂಬ ರೂಲ್ಸ್ ಗೊಂದಲ ಸೃಷ್ಟಿಸಿದೆ. ಮೋದಿ ರಾಜ್ಯ ಪ್ರವಾಸ ಕೋವಿಡ್ ಪರೀಕ್ಷೆಯ ಗೊಂದಲ ತಂದಿಟ್ಟಿದ್ದು, ರಾಜ್ಯಪಾಲರು, ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಸಚಿವರು, ಶಾಸಕರು, ಬಿಜೆಪಿ ಮುಖಂಡರು, ಸಾರ್ವಜನಿಕರು ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಬೇಕೆಂಬ ಗೊಂದಲ ಉಂಟಾಗಿದೆ. ಪೊಲೀಸ್ ಇಲಾಖೆ ಪ್ರಧಾನಿ ಕಾರ್ಯಕ್ರಮದಲ್ಲಿ ಕರ್ತವ್ಯಕ್ಕೆ ಹಾಜರಾಗುವ ಅಧಿಕಾರಿ ಸಿಬ್ಬಂದಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಎಂಬ ಆದೇಶ ಮಾಡಿದೆ. ಅದೇ ಆದೇಶವನ್ನೂ ಮಾಧ್ಯಮದವರು ಪಾಲಿಸಬೇಕೆಂದು ವಾರ್ತಾ ಇಲಾಖೆಯಿಂದ ಪ್ರಕಟಣೆ ಹೊರಡಿಸಲಾಗಿದೆ.