ಕಿಮ್ ಜಾಂಗ್ ಉನ್ ಮಾಡುವ ಕ್ಷಿಪಣಿ ಪರೀಕ್ಷೆಗಳು ಯಶಸ್ವಿ ಆಗುವವರೆಗೂ ಹೊರಜಗತ್ತಿಗೆ ತಿಳಿಯುವುದಿಲ್ಲ. ಅಂಥದರಲ್ಲಿ ಮೊದಲ ಬಾರಿಗೆ ಇದೇ ಕಿಮ್ ಜಾಂಗ್ ಉನ್ ಉತ್ತರ ಕೊರಿಯಾದ ಸರ್ವಾಧಿಕಾರಿಯು ತನ್ನ ಉತ್ತರಾಧಿಕಾರಿ ಆಗಿರುವ ತಮ್ಮ ಮಗಳ ಜೊತೆಗೆ ಕಾಣಿಸಿಕೊಂಡಿದ್ದಾರೆ. ಉತ್ತರ ಕೊರಿಯಾವು ನವೆಂಬರ್ 18ರ ಶುಕ್ರವಾರದಂದು ಹ್ವಾಸಾಂಗ್-17 ಖಂಡಾಂತರ ಕ್ಷಿಪಣಿ ಪರೀಕ್ಷೆ ನಡೆಸಿದೆ ಎಂದು ರಾಜ್ಯ ಸುದ್ದಿ ಸಂಸ್ಥೆ KCNA ಶನಿವಾರ ವರದಿ ಮಾಡಿದೆ. ಈ ಸಂದರ್ಭದಲ್ಲಿ ಉತ್ತರ ಕೊರಿಯಾದ ನಾಯಕ ಕಿಮ್ ಜೊಂಗ್ ಉನ್ ಜೊತೆಗೆ ಮಗಳು ಸಹ ಪರಮಾಣು ಸಶಸ್ತ್ರ ದೇಶದ ಅತಿದೊಡ್ಡ ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾವಣೆಯನ್ನು ಪರಿಶೀಲಿಸುತ್ತಿರುವ ಕಂಡು ಬಂದಿದೆ. ಈ ತಂದೆ-ಮಗಳ ಜೋಡಿಯ ಫೋಟೋಗಳೊಂದಿಗೆ ಜಾಗತಿಕ ಮಾಧ್ಯಮಗಳು ವರದಿ ಮಾಡಿವೆ. ಆ ಮೂಲಕ ಜಗತ್ತಿನ ಎದುರಿಗೆ ಕಿಮ್ ಜಾಂಗ್ ಉನ್, ತಮ್ಮ ಮಗಳನ್ನು ಮೊದಲ ಬಾರಿಗೆ ಪರಿಚಯಿಸಿದ್ದಾರೆ.