ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ 5 ಯೋಜನೆಗಳಲ್ಲಿ ಮೂರು ಗ್ಯಾರಂಟಿ ಮಾತ್ರ ಮೊದಲ ಹಂತದಲ್ಲಿ ಜಾರಿ ಮಾಡಲು ತೀರ್ಮಾನಿಸಲಾಗಿದೆ. ಅನ್ನಭಾಗ್ಯ, ಗೃಹ ಜ್ಯೋತಿ, ಉಚಿತ ಬಸ್ ಪ್ರಯಾಣ ಮಾತ್ರ ಮೊದಲ ಹಂತದಲ್ಲಿ ಜಾರಿಯಾಗುತ್ತಿದ್ದು, ಯುವನಿಧಿ ಮತ್ತು ಗೃಹ ಲಕ್ಷ್ಮೀ ಗ್ಯಾರಂಟಿ ಎರಡನೇ ಹಂತದಲ್ಲಿ ಜಾರಿ ಮಾಡಲು ನಿರ್ಧರಿಸಲಾಗಿದೆ. ಸಚಿವರು ಅಧಿಕಾರಿಗಳಜೊತೆಗೆ ಸಿಎಂ ಚರ್ಚೆ ಮಾಡಿದ್ದಾರೆ. ಹಣಕಾಸಿನ ಲಭ್ಯತೆ ಮತ್ತು ವೆಚ್ಚ ಕುರಿತು ಚರ್ಚೆ ಆಗಿದೆ. ಸಚಿವ ಸಂಪುಟ ಸಭೆ ಶುಕ್ರವಾರ ನಡೆಯಲಿದೆ. ಕಂಡೀಷನ್ ಇರುತ್ತಾ ಅನ್ನೋ ಬಗ್ಗೆ ಸ್ಪಷ್ಟನೆ ಕೊಟ್ಟ ಡಿಕೆಶಿವಕುಮಾರ್, ಯಾರಿಗೆ ಬಸ್? ಎಲ್ಲಿಂದ? ಎಲ್ಲಾ ಲೆಕ್ಕಾಚಾರ ಬೇಕು. ಭತ್ಯೆ ಕೊಡುವ ಬಗ್ಗೆ ಸಹ ಲೆಕ್ಕಾಚಾರ ಹಾಕಬೇಕು ಎಂದಿದ್ದಾರೆ.ಯಾವ ಗಾಸಿಪ್ ಕೂಡ ಹಾಕಬೇಡಿ. ಹಾಗಂತೆ ಹೀಗಂತೆ ಅಂತ ಯಾರೂ ಹೇಳೋದಕ್ಕೆ ಹೋಗಬೇಡಿ. ತೀರ್ಮಾನ ಮಾಡುವುದು ಸರ್ಕಾರ. ನಿಮಗೆ ಅನಿಸಿದ್ದನ್ನೆಲ್ಲ ಹೇಳೋಕಾಗಲ್ಲ. ನೀವು ಬಹಳ ಸ್ಪೀಡ್ ನಲ್ಲಿದ್ದೀರಿ ನಾವು ನಿಮ್ಮಷ್ಟು ಸ್ಪೀಡ್ ಇಲ್ಲ ಎಂದು ಮಾಧ್ಯಮಗಳಿಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.ವಿಪಕ್ಷಗಳು ಏನದ್ರು ಹೇಳಲಿ. ಪ್ರಜಾಪ್ರಭುತ್ವದಲ್ಲಿ ಮಾತನಾಡಲು ಅವಕಾಶ ಇದೆ. ಬಿಜೆಪಿ ಕೊಟ್ಟ ಭರವಸೆ ಈಡೇರಿಸಿಲ್ಲ. ನಮ್ಮ ಭರವಸೆ ಕ್ರಮಬದ್ಧವಾಗಿ ಆಗಬೇಕು. ಆ ನಿಟ್ಟಿನಲ್ಲಿ ಯೋಜನೆ ಜಾರಿ ಮಾಡಲು ಹೊರಟ್ಟಿದ್ದೇವೆ.