ರಾಜ್ಯಸಭೆಯಲ್ಲಿ ಮಣಿಪುರ ಜನಾಂಗೀಯ ಸಂಘರ್ಷ ಬಗ್ಗೆ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ಆಡಳಿತ ಪಕ್ಷದ ಸದಸ್ಯರು ನಿಯಮ 167 ರ ಅಡಿಯಲ್ಲಿ ಚರ್ಚೆ ಮಾಡಲು ಒಪ್ಪಿಕೊಂಡಿದ್ದರು. ಸದನಕ್ಕೆ ಬರುತ್ತಿದ್ದಂತೆ ತಮ್ಮ ನಿಲುವು ಬದಲಾಯಿಸಿದ್ದಾರೆ. ಮಣಿಪುರ ಬಗ್ಗೆ ಚರ್ಚೆ ಮಾಡದಿರುವುದು ಯಾಕೆ? ಪ್ರಧಾನಿ ನರೇಂದ್ರ ಮೋದಿ ಬಂದು ಈ ಬಗ್ಗೆ ಮಾತನಾಡಬೇಕು.ರಾಜ್ಯಸಭೆಗೆ ಪ್ರಧಾನಮಂತ್ರಿ ಬಂದು ಉತ್ತರ ಕೊಡಲಿ, ಇದಕ್ಕೆ ಆಡಳಿತ ಪಕ್ಷದ ನಾಯಕರು ಗದ್ದಲ ಮಾಡಿದರು. ಇದರಿಂದ ಆಕ್ರೋಶಗೊಂಡ ಖರ್ಗೆ, ಮೋದಿ ಏನು ಪರಮಾತ್ಮನೇ? ಅವರೇನು ದೇವರಲ್ಲ. ರಾಜ್ಯಸಭೆಗೆ ಬಂದು ಉತ್ತರ ಕೊಡಲಿ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದರು. ಖರ್ಗೆ ಮಾತಿಗೆ ಸದನದಲ್ಲಿ ಹೆಚ್ಚಿದ ಗದ್ದಲ, ಕಲಾಪ ಮುಂದೂಡಿಕೆ ಮಾಡಲಾಯಿತು.