ಮೋದಿ ಮತ್ತೆ ಪ್ರಧಾನಿಯಾದರೆ ದೇಶಕ್ಕೆ ಅಪಾಯ: ನಿರ್ಮಲ ಸೀತಾರಾಮನ್‌ಪತಿ ಪರಕಾಲ ಪ್ರಭಾಕರ್‌

ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್‌ಅವರ ಪತಿ ಪರಕಾಲ ಪ್ರಭಾಕರ್‌ಅವರು ಮತ್ತೆ ಮೋದಿ ಪ್ರಧಾನಿಯಾದರೆ ದೇಶಕ್ಕೆ ಅಪಾಯ ಎಂದು ಸುದ್ದಿ ಸಂಸ್ಥೆಯೊಂದಿಗೆ ಮಾತನಾಡುವ ವೇಳೆ ಅವರು ಈ ರೀತಿ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತವು ಆರ್ಥಿಕತೆ ಮತ್ತು ಇತರ ಹಲವು ವಿಷಯಗಳ ನಿರ್ವಹಣೆಯಲ್ಲಿ ಅಸಮರ್ಥವಾಗಿದೆ. ಆದರೆ ಜನರಲ್ಲಿ ಗೌಪ್ಯತವಾಗಿರುವ ವಿಭಜಕ ಭಾವನೆಗಳನ್ನು ಹೊರ ತರಲು ಅದು ಅತ್ಯಂತ ಸಮರ್ಥವಾಗಿದೆ ಎಂದು ಅರ್ಥಶಾಸ್ತ್ರಜ್ಞರೂ ಆಗಿರುವ ಡಾ. ಪರಕಾಲ ಪ್ರಭಾಕರ್ ಅವರು ಸಂದರ್ಶನದಲ್ಲಿ ಹೇಳಿದ್ದಾರೆ.ಡಾ ಪ್ರಭಾಕರ್ ಅವರ ಹೊಸ ಪುಸ್ತಕ ಇತ್ತೀಚೆಗೆ ಬೆಂಗಳೂರಿನಲ್ಲಿ ಔಪಚಾರಿಕವಾಗಿ ಬಿಡುಗಡೆಯಾಗಿದೆ. ಈ ಪುಸ್ತಕವು ಮೋದಿ ಸರ್ಕಾರದ ಆರ್ಥಿಕತೆ, ರಾಜಕೀಯ ಮತ್ತು ಇತರ ವಿಷಯಗಳ ಬಗ್ಗೆ ಪ್ರಬಂಧಗಳ ಸರಣಿಯನ್ನು ಒಳಗೊಂಡಿದೆ. ಡಾ. ಪರಕಾಲ ಪ್ರಭಾಕರ್‌ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಪಿಎಚ್.ಡಿ ಪಡೆದಿದ್ದಾರೆ. 2014ರಲ್ಲಿ ನರೇಂದ್ರ ಮೋದಿ ಮತ್ತು ಬಿಜೆಪಿಯವರು ಉತ್ತಮ ಆಡಳಿತ, ಸ್ವಚ್ಛ ಮತ್ತು ಭ್ರಷ್ಟಾಚಾರ ಮುಕ್ತ ಸರ್ಕಾರ ಮತ್ತು ಅಭಿವೃದ್ಧಿ ಭರವಸೆ ನೀಡಿ ಮತ ಕೇಳಿದ್ದರು. ಹಿಂದೂ ರಾಷ್ಟ್ರ ಮತ್ತು ಹಿಂದುತ್ವದ ನಿಜವಾದ ಉದ್ದೇಶವನ್ನು ಮುಂದಿಟ್ಟು ನರೇಂದ್ರ ಮೋದಿ ಅವರು ಮೊದಲ ಬಾರಿಗೆ ದೇಶದ ಜನರ ವಿಶ್ವಾಸವನ್ನು ಗೆದ್ದಿರಲಿಲ್ಲ. ಇಲ್ಲಿ ಟ್ರೋಜನ್‌ಕುದುರೆಯಂತೆ ಅಭಿವೃದ್ಧಿ ಪದವನ್ನು ಬಳಸಲಾಗಿದೆ. ಗೆಲ್ಲಲು ಬಳಸಿದ ಅಭಿವೃದ್ಧಿಯ ಹಲಗೆಯ ಮೇಲೆ ಗೆದ್ದ ಬಿಜೆಪಿಯು ಹಿಂದುತ್ವವನ್ನು ಕುತಂತ್ರದಿಂದ ಕಳ್ಳಸಾಗಣೆ ಮಾಡಿದೆ. 2024 ರಲ್ಲಿ ಮತ್ತೊಂದು ಬಾರಿ ಮೋದಿ ಸರ್ಕಾರ ಬಂದರೆ ಅದು ಆರ್ಥಿಕತೆಗೆ ಮಾತ್ರವಲ್ಲದೆ, ಒಟ್ಟಾರೆ ರಾಷ್ಟ್ರಕ್ಕೆ ವಿಪತ್ತು ತರಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಹಿಂದುತ್ವದ ಅಜೆಂಡಾದಿಂದ ಪ್ರೇರಿತರಾಗಿ ಜನರನ್ನು ಒಟ್ಟುಗೂಡಿಸುವ ಮತ್ತು ಅವರ ಕೀಳು ಪ್ರವೃತ್ತಿಯನ್ನು ಉದ್ದೀಪಿಸುವ ಪ್ರಧಾನಿ ಮೋದಿ ಮತ್ತು ಬಿಜೆಪಿಯ ಸಾಮರ್ಥ್ಯದಿಂದಾಗಿ ಅವರು ಜನಪ್ರಿಯತೆ ಹೊಂದಿದ್ದಾರೆ. 2014ರ ಚುನಾವಣೆಯ ಪೂರ್ವದಲ್ಲಿ ನಡೆದ ಹೋರಾಟವು ಹಿಂದೂ ಮತ್ತು ಮುಸ್ಲಿಮರ ನಡುವೆ ಆಗಿರಲಿಲ್ಲ. ಆ ಹೋರಾಟವು, ಬಡತನ ಮತ್ತು ನಿರುದ್ಯೋಗದ ವಿರುದ್ಧ ಹಿಂದೂಗಳು ಮತ್ತು ಮುಸ್ಲಿಮರು ಒಟ್ಟಾಗಿ ನಡೆಸಿದ ಹೋರಾಟವಾಗಿತ್ತು ಎಂದಿದ್ದಾರೆ.

Leave a Reply

Your email address will not be published. Required fields are marked *