ಮೋದಿ ಅಮೆರಿಕ ಪ್ರವಾಸ ಅಂತ್ಯವಾದ ಕೆಲವೇ ದಿನಗಳಲ್ಲಿ ಪುಟಿನ್‌ಮೋದಿಗೆ ಮೆಚ್ಚುಗೆ ಸೂಚಿಸಿರುವುದು ಅಚ್ಚರಿಗೆ ಕಾರಣವಾಗಿದೆ.
ಮಾಸ್ಕೋದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತುನ್ನಾಡಿದ ಪುಟಿನ್ ಭಾರತದ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದರು. ಈ ವೇಳೆ ತಮ್ಮ ರಾಷ್ಟ್ರದ ದೇಶಿಯ ಉತ್ಪನ್ನಗಳು ಮತ್ತು ಬ್ರಾಂಡ್‌ಗಳನ್ನು ಉತ್ತೇಜಿಸಲು ಭಾರತವನ್ನು ಉತ್ತಮ ಉದಾಹರಣೆಯನ್ನಾಗಿ ನೀಡಿದರು. ಮೇಕ್‌ಇನ್‌ಇಂಡಿಯಾ ಉಪಕ್ರಮ ಭಾರತದ ಆರ್ಥಿಕತೆ ಮೇಲೆ ಹೇಗೆ ಸಕಾರಾತ್ಮಕ ಪರಿಣಾಮ ಬೀರಿದೆ ಎಂಬುದನ್ನು ಕೂಡ ಪುಟಿನ್‌ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದು, ಗಮನಾರ್ಹವಾಗಿತ್ತು.
ರಷ್ಯಾದ ಅದ್ಭುತ ಸ್ನೇಹಿತ ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತದಲ್ಲಿರುವ ನಮ್ಮ ಸ್ನೇಹಿತರು ಕೆಲ ವರ್ಷಗಳ ಹಿಂದೆ ಮೇಕ್‌ಇನ್‌ಇಂಡಿಯಾ ಎಂಬ ಪರಿಕಲ್ಪನೆಯನ್ನು ಜಗತ್ತಿನ ಮುಂದಿಟ್ಟರು. ಇದು ಭಾರತದ ಆರ್ಥಿಕತೆಯ ಮೇಲೆ ಬಹಳ ಸಕಾರಾತ್ಮಕ ಪರಿಣಾಮವನ್ನು ಬೀರಿತು ಎಂದು ವ್ಲಾಡಿಮಿರ್‌ಪುಟಿನ್‌ಹೇಳಿದರು. ಇದೇ ವೇಳೆ ಮೇಕ್ ಇನ್ ಇಂಡಿಯಾದ ಉದಾಹರಣೆ ನೀಡುವ ಮೂಲಕ ಪುಟಿನ್, ವಿದೇಶಗಳಿಂದ ಆಮದು ಮಾಡಿಕೊಂಡ ಉತ್ಪನ್ನಗಳ ಬದಲು ತನ್ನದೇ ಆಧುನಿಕ ಸರಕುಗಳು, ಸೇವೆಗಳು ಮತ್ತು ತಂತ್ರಜ್ಞಾನವನ್ನು ಬಳಸುವಂತೆ ರಷ್ಯನ್ನರಿಗೆ ಕರೆ ನೀಡಿದರು.ಉಕ್ರೇನ್‌ಮೇಲೆ ರಷ್ಯಾ ಆಕ್ರಮಣ ಮಾಡಿದ ಬಳಿಕ ವಿಶ್ವದ ಬಹುತೇಕ ರಾಷ್ಟ್ರಗಳು ರಷ್ಯಾ ಮೇಲೆ ಆರ್ಥಿಕ ನಿರ್ಬಂಧವನ್ನು ಹೇರಿದ್ದವು. ಆದರೆ, ಭಾರತ ಮಾತ್ರ ರಷ್ಯಾ ಜೊತೆಗಿನ ಸಂಬಂಧವನ್ನು ಕಡಿತಗೊಳಿಸದೇ ವ್ಯಾಪಾರ ವಹಿವಾಟನ್ನು ಮುಂದುವರಿಸಿತ್ತು. ಹಲವು ಭಾರೀ ವಿಶ್ವಸಂಸ್ಥೆಯಲ್ಲೂ ಕೂಡ ತಟಸ್ಥವಾಗಿದ್ದ ಭಾರತ ಪರೋಕ್ಷವಾಗಿ ರಷ್ಯಾದ ಜೊತೆ ನಿಂತಿತ್ತು.