ಮೋದಿ ಹಾಗೂ ಬಿಜೆಪಿ ನಾಯಕರನ್ನು ವರ್ತಮಾನದಲ್ಲಿ ಏನಾಗುತ್ತಿದೆ ಎಂದು ಪ್ರಶ್ನಿಸಿದಾಗಲೆಲ್ಲಾ ಕಾಂಗ್ರೆಸ್ ಅನ್ನು ದೂಷಿಸುತ್ತಾರೆ’;ರಾಹುಲ್‌ಗಾಂಧಿ-

ನ್ಯೂಯಾರ್ಕ್‌ನ ಜಾವಿಟ್ಸ್ ಸೆಂಟರ್‌ನಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್‌ ಗಾಂಧಿ ಅವರು, ‘ನೀವು ಕಾರನ್ನು ಓಡಿಸುತ್ತಿದ್ದೀರಿ ಎಂದಿಟ್ಟುಕೊಳ್ಳಿ. ಆಗ ನೀವು ಮುಂಬದಿಯನ್ನು ನೋಡಿಕೊಂಡು ಓಡಿಸುತ್ತೀರಿ. ಹಿಂದೆ ನೋಡಿಕೊಂಡು ಓಡಿಸಿದರೆ ನೀವು ಒಂದರ ನಂತರ ಒಂದರಂತೆ ಅಪಘಾತ ಮಾಡಿಕೊಳ್ಳುತ್ತೀರಿ. ಇದನ್ನೇ ನರೇಂದ್ರ ಮೋದಿಯವರ ಮಾಡುತ್ತಿದ್ದಾರೆ. ಅವರು ‘ನೀವು ಮೋದಿ ಹಾಗೂ ಬಿಜೆಪಿ ನಾಯಕರನ್ನು ಏನು ಬೇಕಾದರೂ ಕೇಳಿ,. ರೈಲು ಅಪಘಾತ ಏಕೆ ಸಂಭವಿಸಿತು ಎಂದು ನೀವು ಅವರನ್ನು ಕೇಳಿ, ಕಾಂಗ್ರೆಸ್ ಇದನ್ನು 50 ವರ್ಷಗಳ ಹಿಂದೆ ಮಾಡಿದೆ ಎಂದು ಅವರು ಹೇಳುತ್ತಾರೆ. ಪಠ್ಯಪುಸ್ತಕಗಳಿಂದ ನೀವು ಆವರ್ತಕ ಕೋಷ್ಟಕ ಮತ್ತು ವಿಕಾಸವನ್ನು ಏಕೆ ತೆಗೆದುಹಾಕಿದ್ದೀರಿ ಎಂದು ಕೇಳಿ, 60 ವರ್ಷಗಳ ಹಿಂದೆ ಕಾಂಗ್ರೆಸ್ ಪಕ್ಷ ಇದನ್ನು ಮಾಡಿದೆ ಎಂಬುದಾಗಿ ಅವರು ಹೇಳುತ್ತಾರೆ’ ಎಂದು ರಾಹುಲ್‌ಟೀಕಿಸಿದರು.

Leave a Reply

Your email address will not be published. Required fields are marked *