ಕೇಂದ್ರ ಸರ್ಕಾರ, ಸುಪ್ರೀಂ ಕೋರ್ಟ್ ಬಯಸಿದ್ರೆ ಅನ್ನಭಾಗ್ಯ ಯೋಜನೆ ಬಂದ್ ಮಾಡಲಾಗುವುದು ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಉಮೇಶ್ ಕತ್ತಿ ಅವರು, ನಾನು ಆ ರೀತಿ ಎಲ್ಲಿಯೂ ಹೇಳಿಲ್ಲ. ಅನ್ನಭಾಗ್ಯ ಯೋಜನೆ ಯಾಕೆ ಬಂದ್ ಮಾಡ್ತಾರೆ?, ಅದು ನನ್ನ ಹೇಳಿಕೆಯಲ್ಲ. ಇದು ರಾಜಕೀಯ ಎಂದು ಗರಂ ಆದರು. ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಸಚಿವರು, ಆಹಾರ ಭದ್ರತಾ ಯೋಜನೆಯಡಿ ಐದು ಕೆಜಿ ಅಕ್ಕಿ ಕೊಡಬೇಕು ಅಂತ ನಮ್ಮ ಹಿಂದಿನ ಸರಕಾರ ಮಾಡಿದ್ದು, ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ನಾಲ್ಕು, ಐದು, ಏಳು ಕೆಜಿ ಅಕ್ಕಿ ಕೊಟ್ಟಿದ್ದಾರೆ. ಹತ್ತು ಕೆಜಿ ಅಕ್ಕಿ ಕೊಟ್ಟಿಲ್ಲ. ನಾವು ಮಾತ್ರ ಹತ್ತು ಕೆಜಿ ಅಕ್ಕಿ ಕೊಡುತ್ತಿದ್ದೇವೆ. ಜೊತೆಗೆ ಜೋಳ, ರಾಗಿ ಕೊಡ್ತಿದ್ದೇವೆ. ಸಿದ್ದರಾಮಯ್ಯ ರಾಜಕೀಯವಾಗಿ ತನಗೆ ಏನು ಬೇಕೋ ಅದನ್ನ ಹೇಳುತ್ತಿದ್ದಾರೆ. ಜನ ಅದನ್ನು ನಂಬಬಾರದು ಯಾವುದೇ ಕಾರಣಕ್ಕೂ ಅನ್ನಭಾಗ್ಯ ಯೋಜನೆ ನಿಲ್ಲಿಸಲ್ಲ ಎಂದರು.