ಯಾವುದೇ ಕಾರಣಕ್ಕೂ ಖಲಿಸ್ತಾನಿ ಭಯೋತ್ಪಾದಕರು ನಿಮ್ಮ ನೆಲವನ್ನು ಬಳಸಲು ಅವಕಾಶ ನೀಡಬೇಡಿ, ಆಪ್ತ ದೇಶಗಳಿಗೆ ಭಾರತದ ಮನವಿ!

ಯಾವುದೇ ಕಾರಣಕ್ಕೂ ಖಲಿಸ್ತಾನಿ ಭಯೋತ್ಪಾದಕರು ನಿಮ್ಮ ನೆಲವನ್ನು ಬಳಸಲು ಅವಕಾಶ ನೀಡಬೇಡಿ ಎಂದು ಭಾರತ ತನ್ನ ಪಾಲುದಾರ ರಾಷ್ಟ್ರಗಳಾದ ಅಮೆರಿಕ, ಇಂಗ್ಲೆಂಡ್‌, ಆಸ್ಟ್ರೇಲಿಯಾ ಮತ್ತು ಕೆನಡಾ ದೇಶಗಳಿಗೆ ಮನವಿ ಮಾಡಿದೆ. ಈ ಕುರಿತಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ಮಾಹಿತಿ ನೀಡಿದ್ದಾರೆ. ಹಾಗೇನಾದರೂ ಖಲಿಸ್ತಾನಿಗಳು ನಿಮ್ಮ ನೆಲದಿಂದ ಕಾರ್ಯನಿರ್ವಹಿಸುತ್ತಿದ್ದರೆ, ಇದು ನಮ್ಮ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆ. ನಾವು ಈ ದೇಶಗಳ ಸರ್ಕಾರದೊಂದಿಗೆ ಪೋಸ್ಟರ್‌ಗಳನ್ನು ಅಂಟಿಸಿರುವ ವಿಷಯವನ್ನು ಪ್ರಸ್ತಾಪ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ. ಕೆನಡಾದಲ್ಲಿ ಖಲಿಸ್ತಾನಿಗಳು ಭಾರತೀಯ ರಾಜತಾಂತ್ರಿಕರ ಹೆಸರುಗಳ ಪೋಸ್ಟರ್‌ಗಳನ್ನು ಅಂಟಿಸಿರುವ ವಿಷಯಕ್ಕೆ ಜೈಶಂಕರ್ ಪ್ರತಿಕ್ರಿಯಿಸಿದರು. ಜೈಶಂಕರ್ ಅವರು ಖಲಿಸ್ತಾನಿಗಳ ಆಮೂಲಾಗ್ರ ಮನಸ್ಥಿತಿಯು ಭಾರತ ಮತ್ತು ಅವರು ವಾಸ ಮಾಡುತ್ತಿರುವ ಪಾಲುದಾರ ದೇಶಗಳಿಗೆ ಹಾನಿಕಾರಕವಾಗಿದೆ. ಇಂತಹ ಉಗ್ರಗಾಮಿ ಮನಸ್ಥಿತಿ ನಮ್ಮ ದ್ವಿಪಕ್ಷೀಯ ಸಂಬಂಧಗಳಿಗೆ ಧಕ್ಕೆ ತರುತ್ತದೆ. ಜುಲೈ 8 ರಂದು ನಡೆಯಲಿರುವ ಮೆರವಣಿಗೆಯ ಕುರಿತಾಗಿ ಖಲಿಸ್ತಾನ್ ಪರ ವ್ಯಕ್ತಿಗಳಿಗೆ ತಿಳಿಸುವ ಪೋಸ್ಟರ್‌ಗಳನ್ನು ಕೆನಡಾದಲ್ಲಿ ಪ್ರಸಾರ ಮಾಡುತ್ತಿರುವ ಸಮಯದಲ್ಲಿ ಜೈಶಂಕರ್‌ಈ ಹೇಳಿಕೆ ನೀಡಿದ್ದಾರೆ.ಸಿಖ್‌ಫಾರ್‌ಜಸ್ಟೀಸ್‌ನ ಮುಖ್ಯ ವಕೀಲನಾಗಿರುವ ಹಾಗೂ ಭಾರತದ ಮೋಸ್ಟ್‌ವಾಂಟೆಡ್‌ಲಿಸ್ಟ್‌ನಲ್ಲಿರುವ ಗುರುಪತ್ವಂತ್ ಪನ್ನುನ್, ನಿಜ್ಜರ್‌ನ ಸಾವನ್ನು ಹತ್ಯೆ ಎಂದು ಕರೆದಿದ್ದಲ್ಲದೆ, ಇದಕ್ಕೆ ಭಾರತವೇ ಕಾರಣ ಎಂದು ನೇರವಾಗಿ ದೂಷಣೆ ಮಾಡಿದ್ದರು. ಭಾರತದ ರಾಜತಾಂತ್ರಿಕರ ಹೆಸರು ಹಾಗೂ ಚಿತ್ರಗಳಿದ್ದ ಪೋಸ್ಟರ್‌ಗಳು ಕಾಣಿಸಿಕೊಂಡ ಬಳಿಕ ಭಾರತ ಅನೌಪಚಾರಿಕ ಮಾರ್ಗಗಳ ಮೂಲಕ ಗ್ಲೋಬಲ್ ಅಫೇರ್ಸ್ ಕೆನಡಾ, ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್ ಮತ್ತು ಒಟ್ಟಾವಾ ಮತ್ತು ಟೊರೊಂಟೊ ಪೊಲೀಸ್ ಇಲಾಖೆಗಳನ್ನು ಸಂಪರ್ಕಿಸಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಖಲಿಸ್ತಾನ್ ಪರ ಚಟುವಟಿಕೆಗಳು ಆಗಾಗ್ಗೆ ನಡೆಯುವ ದೇಶಗಳ ಸರ್ಕಾರಗಳೊಂದಿಗೆ ಶೀಘ್ರದಲ್ಲೇ ಈ ವಿಷಯವನ್ನು ಔಪಚಾರಿಕವಾಗಿ ಪ್ರಸ್ತಾಪಿಸಲಾಗುವುದು ಎಂದು ಜೈಶಂಕರ್ ಹೇಳಿದರು.

Leave a Reply

Your email address will not be published. Required fields are marked *