ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಪ್ರಕರಣದ ಪತ್ರ ವಿವಾದದ ಬಗ್ಗೆ ಶಾಸಕ ತನ್ವೀರ್ ಶೇಠ್ ಪ್ರತಿಕ್ರಿಯೆ. ನಾನು ಯಾವುದೇ ಒಂದು ಕೋಮಿನ ವಿಚಾರದಲ್ಲಿ ಪತ್ರ ಬರೆದು ಪ್ರಸ್ತಾಪ ಮಾಡಿಲ್ಲ. ಕಾಂಗ್ರೆಸ್ ಶಾಸಕರ ಮನೆಗೆ ಬೆಂಕಿ ಇಟ್ಟವರು, ಪೊಲೀಸ್ ಠಾಣೆಗೆ ಬೆಂಕಿ ಇಟ್ಟವರನ್ನು ನಾನು ಅಮಾಯಕರು ಎಂದು ಕರೆದಿಲ್ಲ. ಅಮಾಯಕರಿಗೆ ನ್ಯಾಯ ಕೊಡಿ ಎಂದಿದ್ದೇನೆ. ಈಗ ಸರ್ಕಾರ ಯಾರು ಅಮಾಯಕರು ಎಂದು ನಿರ್ಧರಿಸಬೇಕು. ಆಲ್ಲದೇ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು. ಅಮಾಯಕರನ್ನು ದಸ್ತಗಿರಿ ಮಾಡಿ ಶಿಕ್ಷೆ ನೀಡಿರುವ ವಿಚಾರವಾಗಿ ಪ್ರಸ್ತಾಪ ಮಾಡಿದ್ದೇನೆ. ಈ ಮೂಲಕ ಪತ್ರ ಬರೆದಿರುವುದನ್ನು ಅವರು ಒಪ್ಪಿಕೊಂಡಿದ್ದಾರೆ. ಬಿಜೆಪಿ ಸರ್ಕಾರ ಇದ್ದಾಗಲೂ ನಾನು ಮನವಿ ಮಾಡಿಕೊಂಡಿದ್ದೆ. ಆದರೆ ಆಗ ಅದು ಹೊರಗೆ ಬಂದಿರಲಿಲ್ಲ. ಯಾವುದೇ ಒಳ್ಳೆ ಕೆಲಸ ಮಾಡಬೇಕಾದರೂ ಟೀಕೆಗಳು ಬೇಕು. ಅಲ್ಲದೇ ಬರೆದಿದ್ದ ಪತ್ರವನ್ನು ಬಿಡುಗಡೆ ಮಾಡಿದ್ದಾರೆ. ನಾನು ಯಾವ ಅಮಾಯಕರ ಹೆಸರನ್ನು ಹೇಳಿಲ್ಲ. ಅವರು ಎಷ್ಟು ಜನ ಇದ್ದಾರೆ ಎಂದು ಸಹ ಲೆಕ್ಕ ಮಾಡಿಲ್ಲ. ಅಮಾಯಕರಿದ್ದರೆ ಬಿಡುಗಡೆ ಮಾಡಿ ಎಂದು ಪತ್ರ ಬರೆದಿದ್ದೇನೆ. ಪತ್ರ ಬರೆದಿದ್ದು ನಿಜ. ಆದರೆ ಒಂದು ಕೋಮಿನ ಬಗ್ಗೆ ಉಲ್ಲೇಖಿಸಿ ಪತ್ರ ಬರೆದಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.