ಹೊಸದಾಗಿ ಯುಕೆ ಪ್ರಧಾನಿ ಲಿಜ್ ಟ್ರಸ್ ಅವರ ಹೊಸ ಸಂಪುಟದಲ್ಲಿ 2 ಭಾರತೀಯ ಮೂಲದ ಸಂಸದರು ಸಚಿವರು ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಭಾರತೀಯ ಮೂಲದ ಸುಯೆಲ್ಲಾ ಬ್ರವರ್‌ಮನ್ ಮತ್ತು ಅಲೋಕ್ ಶರ್ಮಾ ಅವರು ಬ್ರಿಟನ್ ಪ್ರಧಾನಿ ಸಂಸತ್ತಿನಲ್ಲಿ ಜಾಗ ಪಡೆದ ಭಾರತೀಯರು. 47 ವರ್ಷದ ಸುಯೆಲ್ಲಾ ಬ್ರಾವರ್‌ಮನ್‌ಅವರಿಗೆ ಗೃಹ ಕಾರ್ಯದರ್ಶಿ ಹುದ್ದೆ ನೀಡಲಾಗಿದೆ. ಹಾಗೆಯೇ ಲಂಡನ್‌ನಲ್ಲಿ ಜನಿಸಿದ ಮೂಲತಃ ವಕೀಲರಾಗಿರುವ ಸುಯೆಲ್ಲಾ ಬ್ರಾವರ್‌ಮನ್, ಆಗ್ನೇಯ ಇಂಗ್ಲೆಂಡ್‌ನ ಫರೆಹ್ಯಾಮ್‌ನ ಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆಯಾಗಿದ್ದಾರೆ. ಇವರು ತಮಿಳು ಮತ್ತು ಗೋವಾ ಮಿಶ್ರ ಪರಂಪರೆಯವರು. ಹಾಗೆಯೇ ಇನ್ನೊಬ್ಬ ಭಾರತೀಯ ಮೂಲದ ಸಚಿವ 55 ವರ್ಷದ ಅಲೋಕ್ ಶರ್ಮಾ ಹುಟ್ಟೂರು ಉತ್ತರಪ್ರದೇಶದ ಆಗ್ರಾ. ಆಗ್ರಾದಿಂದ ಯುಕೆಗೆ ವಲಸೆ ಹೋದ ಅವರು ಈಗ ಬ್ರಿಟನ್ ಪ್ರಧಾನಿ ಜೊತೆ ಕೆಲಸ ಮಾಡಲಿದ್ದಾರೆ. ಇವರು ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಭೆಯ COP26ರ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.