ಯುದ್ಧದ ಸುಳಿಗೆ ಸಿಲುಕಿ ಇಸ್ರೇಲ್ ನಲುಗಿ ಹೋಗಿದ್ದು ಭಾರತದ ಬಳಿ ಸಹಾಯ ಬೇಡಿಕೊಳ್ಳುತ್ತಿದೆ

ಭಾರತ ಬಲಾಢ್ಯವಾಗಿ ಬೆಳೆದು ನಿಲ್ಲುತ್ತಿದೆ, ಅದರಲ್ಲೂ ಭಾರತದ ಆರ್ಥಿಕ ಸ್ಥಿತಿಗತಿ ಇದೀಗ ಅತ್ಯುತ್ತಮ ಮಟ್ಟಕ್ಕೆ ತಲುಪುತ್ತಿದೆ. ಹೀಗಿದ್ದಾಗ ಜಗತ್ತಿನ ಪ್ರತಿಯೊಂದು ದೇಶಕ್ಕೂ ಭಾರತದ ಅಗತ್ಯತೆ ಬೇಕೆ ಬೇಕು. ಅದರಲ್ಲೂ ಇಸ್ರೇಲ್ ದೇಶ ಮೊದಲಿನಿಂದ ಭಾರತದ ಮಿತ್ರನಾಗಿಯೇ ಗುರುತಿಸಿಕೊಂಡಿದೆ. ಈಗ ಯುದ್ಧದ ಸುಳಿಗೆ ಸಿಲುಕಿ ಇಸ್ರೇಲ್ ನಲುಗಿ ಹೋಗಿದ್ದು, ಭಾರತ ಸಹಾಯ ಮಾಡಲಿ ಅಂತಾ ಕಾದು ಕುಳಿತಿದೆ. ಹೌದು ಇಸ್ರೇಲ್ ಮತ್ತು ಹಮಾಸ್ ನಡುವೆ ಯುದ್ಧ ಶುರುವಾಗಿ ಈಗಾಗಲೇ 2 ತಿಂಗಳುಗಳೇ ಕಳೆದು ಹೋಗಿವೆ. ಇದೀಗ ಯುದ್ಧ 3 ತಿಂಗಳಿಗೆ ಕಾಲಿಟ್ಟಿದೆ. ಪರಿಸ್ಥಿತಿ ಹೀಗಿದ್ದಾಗ ಇಸ್ರೇಲ್ ಪಾಲಿಗೆ ದೊಡ್ಡ ಸಮಸ್ಯೆ ಎದುರಾಗಿದೆ. ಒಂದು ಕಡೆ ಶಸ್ತ್ರಾಸ್ತ್ರಗಳ ಸಮಸ್ಯೆ ಕಾಡುತ್ತಿದ್ದರೆ, ಮತ್ತೊಂದು ಕಡೆ ಕಾರ್ಮಿಕರ ಸಮಸ್ಯೆ ಕೂಡ ದಟ್ಟವಾಗಿದೆ. ಹೀಗಾಗಿ ಭಾರತದ ಬಳಿ ಇದೇ ವಿಚಾರವಾಗಿ ಇಸ್ರೇಲ್ ಮನವಿ ಮಾಡುತ್ತಿದೆಯಂತೆ. ಭಾರತಕ್ಕೆ ಬಂದಿದೆ ಇಸ್ರೇಲ್ ತಂಡ ಹೌದು, ಯುದ್ಧ ಶುರುವಾದ ನಂತರ ಇಸ್ರೇಲ್ ಸಾಕಷ್ಟು ಸಮಸ್ಯೆಗೆ ಸಿಲುಕಿಬಿಟ್ಟಿದೆ. ಹೀಗೆ ಸಂಕಷ್ಟದ ಸುಳಿಗೆ ಸಿಲುಕಿರುವಾಗ ಇಸ್ರೇಲ್‌ಗೆ ಸಹಾಯ ಮಾಡುತ್ತಿರುವುದು ಕೇವಲ ಅಮೆರಿಕ ಅದನ್ನ ಬಿಟ್ಟರೆ ಪರೋಕ್ಷವಾಗಿ ಇಸ್ರೇಲ್ ಬೆನ್ನಿಗೆ ನಿಂತಿರುವುದು ಭಾರತ. ಹೀಗೆ ಕಾರ್ಮಿಕರ ತೀವ್ರ ಕೊರತೆ ಎದುರಿಸುತ್ತಿರುವ ಇಸ್ರೇಲ್‌ನ ಕಟ್ಟಡ ನಿರ್ಮಾಣ ಉದ್ಯಮಿಗಳು ಇದೀಗ ಭಾರತಕ್ಕೆ ಮನವಿ ಮಾಡುತ್ತಿದ್ದಾರೆ. ಅಂದಹಾಗೆ ಸಾವಿರಾರು ಕಾರ್ಮಿಕರನ್ನು ಭಾರತದಿಂದ ಇಸ್ರೇಲ್‌ಗೆ ಕರೆತರಲು ಆಯ್ಕೆದಾರರ ತಂಡ ಕಳೆದ ವಾರ ಭಾರತಕ್ಕೆ ಭೇಟಿ ನೀಡಿತ್ತು. ಅಷ್ಟಕ್ಕೂ, ಮುಂದಿನ ವಾರ ಮತ್ತೊಂದು ತಂಡ ಭಾರತಕ್ಕೆ ಭೇಟಿ ನೀಡಲಿದೆ. ಅಲ್ಲಿ ಮತ್ತಷ್ಟು ಮಾಹಿತಿ ಪರಿಶೀಲನೆ ಮಾಡಿ, ಮುಂದಿನ ಪ್ರಕ್ರಿಯೆಗೆ ಚಾಲನೆ ನೀಡುವ ಬಗ್ಗೆ ಈಗ ಇಸ್ರೇಲ್‌ನ ಬಿಲ್ಡರ್ಸ್‌ಅಸೋಸಿಯೇಷನ್‌ಮಾಹಿತಿ ನೀಡಿದೆ. ದೆಹಲಿ, ಚೆನ್ನೈನಲ್ಲಿ ಡಿ. 27ಕ್ಕೆ ನೇಮಕಾತಿ ಪ್ರಕ್ರಿಯೆ ಶುರುವಾಗಲಿದೆ ಎನ್ನಲಾಗಿದ್ದು, ಸುಮಾರು 10 ಸಾವಿರ ಕಾರ್ಮಿಕರ ನೇಮಕಾತಿಗಾಗಿ ಸರ್ಕಾರ ಅನುಮತಿ ನೀಡಿದೆ ಅಂತೆ. ಈ ಸಂಖ್ಯೆ 30 ಸಾವಿರದ ತನಕ ಹೆಚ್ಚಬಹುದು. 10ರಿಂದ 15 ದಿನ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಇದು ಹಲವು ತಿಂಗಳವರೆಗೂ ನಡೆಯುವ ಸಾಧ್ಯತೆ ಇದೆ ಎಂದು ಇಸ್ರೇಲ್‌ಬಿಲ್ಡರ್ಸ್‌ಅಸೋಸಿಯೇಷನ್‌ನ (ಐಬಿಎ) ಶೇ ಪೌಜ್ನರ್‌ತಿಳಿಸಿದ್ದಾರೆ.

Leave a Reply

Your email address will not be published. Required fields are marked *