ಯುದ್ಧ ಪೀಡಿತ ಯೆಮೆನ್‌ನ ರಂಜಾನ್‌ಕಾರ್ಯಕ್ರಮದಲ್ಲಿ ಕಾಲ್ತುಳಿತ: 85 ಜನ ಬಲಿ, 300 ಕ್ಕೂ ಹೆಚ್ಚು ಜನರಿಗೆ ಗಾಯ

ಯುದ್ಧ ಪೀಡಿತ ಯೆಮೆನ್‌ನಲ್ಲಿ ರಂಜಾನ್‌ಮಾಸದ ಹಿನ್ನೆಲೆ ಚಾರಿಟಿ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಜನರಿಗೆ 8 ಡಾಲರ್‌ಅಥವಾ ಅಲ್ಲಿನ ಕರೆನ್ಸಿ ಮೌಲ್ಯದಲ್ಲಿ 5,000 ಹಣಕಾಸು ನೆರವು ನೀಡಲಾಗುತ್ತಿದ್ದರಿಂದ ಜನಸಂದಣಿ ಹೆಚ್ಚಾಗಿದೆ. ಇದರಿಂದ ಯೆಮೆನ್ ರಾಜಧಾನಿ ಬಾಬ್ ಅಲ್-ಯೆಮೆನ್ ಜಿಲ್ಲೆಯಲ್ಲಿ ಕಾಲ್ತುಳಿತ ಉಂಟಾಗಿದ್ದು, ಈ ವೇಳೆ ಕನಿಷ್ಠ 85 ಮಂದಿ ಮೃತಪಟ್ಟಿದ್ದಾರೆ ಮತ್ತು 322 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. “ಸತ್ತವರಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ” ಸತ್ತವರು ಮತ್ತು ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ ಮತ್ತು ಹಣ ವಿತರಣೆಗೆ ಕಾರಣರಾದವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಹೌತಿ ಅಧಿಕಾರಿಗಳು ತಿಳಿಸಿದ್ದಾರೆ. ಇದು ದಶಕದಲ್ಲಿ ಸಂಭವಿಸಿದ ಮಾರಣಾಂತಿಕ ಕಾಲ್ತುಳಿತಗಳಲ್ಲಿ ಒಂದಾಗಿದೆ.ಮುಸ್ಲಿಂ ರಜಾದಿನವಾದ ಈದ್ ಅಲ್-ಫಿತರ್‌ಗೆ ಕೆಲವು ದಿನಗಳ ಮುಂಚಿತವಾಗಿ ಈ ದುರಂತ ಸಂಭವಿಸಿದೆ. ಇದು ಇಸ್ಲಾಮಿಕ್ ಪವಿತ್ರ ತಿಂಗಳ ರಂಜಾನ್ ಅಂತ್ಯವನ್ನು ಸೂಚಿಸುತ್ತದೆ.

Leave a Reply

Your email address will not be published. Required fields are marked *