ಈಗಾಗಲೇ ಹೇಳಿರುವಂತೆ 2022-23ನೇ ಶೈಕ್ಷಣಿಕ ವರ್ಷದಲ್ಲಿ ಉತ್ತೀರ್ಣರಾದ ಪದವೀಧರರಿಗೆ ಬಿಎ, ಬಿಎಸ್ಸಿ, ಬಿಕಾಂ, ಎಂಎ, ಎಎಸ್ಸಿ, ಎಂಕಾಂ, ಬಿಇ, ಎಂಬಿಬಿಎಸ್‌ಸೇರಿದಂತೆ ತಾಂತ್ರಿಕ ಶಿಕ್ಷಣ ಪಡೆದವರಿಗೂ ಯುವ ನಿಧಿ ಯೋಜನೆಯಡಿ ಹಣ ಕೊಡುತ್ತೇವೆ. ಆರು ತಿಂಗಳೊಳಗೆ ಕೆಲಸ ಸಿಗದಿದ್ದರೆ ರಾಜ್ಯ ಸರ್ಕಾರ ನಿರುದ್ಯೋಗ ಭತ್ಯೆಯಾಗಿ ಪದವೀಧರರಿಗೆ ತಲಾ 3 ಸಾವಿರ ರು. ಮತ್ತು ಡಿಪ್ಲೋಮಾ ಮಾಡಿದವರಿಗೆ ತಲಾ 1500 ರು.ಗಳನ್ನು ಯುವನಿಧಿ ಯೋಜನೆಯಡಿ ಕೊಡಲಿದೆ. ನವೆಂಬರ್‌ಅಥವಾ ಡಿಸೆಂಬರ್‌ತಿಂಗಳಿಂದ ನೀಡುತ್ತದೆ. ಆ ಸಮಯಕ್ಕೆ ಯಾರಿಗೆ ಕೆಲಸ ಸಿಕ್ಕಿರುವುದಿಲ್ಲವೋ ಅವರಿಗೆ ಅಂದಿನಿಂದ 24 ತಿಂಗಳವರೆಗೆ ಪ್ರತಿ ತಿಂಗಳು ನಿಗದಿತ ಹಣ ಕೊಡುತ್ತೇವೆ ಎಂದರು. ಈವರೆಗೂ ನಾವು ನುಡಿದಂತೆ ನಡೆದಿದ್ದೇವೆ. ಮುಂದೆಯೂ ನಡೆಯುತ್ತೇವೆ. ಯುವ ನಿಧಿ ಯೋಜನೆಯಡಿ ಅರ್ಹರಾಗುವ ಯುವಜನರಿಗೆ ಹಣವನ್ನು ನಾವು ಶೇಕಡ ನೂರರಷ್ಟು ಕೊಟ್ಟೇ ಕೊಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.