ಉಕ್ರೇನ್‌ಸಂಘರ್ಷದ ಬಳಿಕ ರಷ್ಯಾ ಅಗ್ಗದ ದರದಲ್ಲಿ ತೈಲ ರಫ್ತು ಮಾಡುವ ಯೋಜನೆಯ ಲಾಭವನ್ನು ಭಾರತ ಮತ್ತು ಚೀನಾ ಹೆಚ್ಚಾಗಿ ಬಳಸಿಕೊಳ್ಳುತ್ತಿದೆ ಎಂದು ವರದಿಯೊಂದು ತಿಳಿಸಿದೆ. ಕಳೆದ ಮೇ ತಿಂಗಳಲ್ಲಿ ರಷ್ಯಾ ರಫ್ತು ಮಾಡಿದ ಒಟ್ಟು ತೈಲದಲ್ಲಿ ಶೇ.80ರಷ್ಟು ಪಾಲನ್ನು ಭಾರತ ಮತ್ತು ಚೀನಾ ಆಮದು ಮಾಡಿಕೊಂಡಿದೆ ಎಂದು ಪ್ಯಾರಿಸ್‌ಮೂಲದ ಅಂತಾರಾಷ್ಟ್ರೀಯ ಇಂಧನ ಏಜೆನ್ಸಿ ಹೇಳಿದೆ. ಮೇ ತಿಂಗಳಲ್ಲಿ ನಿತ್ಯವೂ ಭಾರತ 20 ಲಕ್ಷ ಮತ್ತು ಚೀನಾ 22 ಲಕ್ಷ ಬ್ಯಾರಲ್‌ಆಮದು ಮಾಡಿಕೊಂಡಿವೆ.ಭಾರತವು ಹೆಚ್ಚೂ ಕಮ್ಮಿ 2 ಮಿಲಿಯನ್ ಬ್ಯಾರೆಲ್ ಖರೀದಿ ಮಾಡುತ್ತಿದೆ. ಆದರೆ ಚೀನಾ ದಿನಕ್ಕೆ 5,00,000 ಬ್ಯಾರೆಲ್‌ಗಳಿಂದ ಹಿಡಿದು ದಿನಕ್ಕೆ 2.2 ಮಿಲಿಯನ್ ಬ್ಯಾರೆಲ್‌ಗಳಿಗೆ ಹೆಚ್ಚಿಸಿದೆ” ಎಂದು ಪ್ಯಾರಿಸ್ ಮೂಲದ ಇಂಧನ ಸಂಸ್ಥೆ ತನ್ನ ಇತ್ತೀಚಿನ ತೈಲ ಮಾರುಕಟ್ಟೆ ವರದಿಯಲ್ಲಿ ಹೇಳಿದೆ.ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿರುವ ಭಾರತವು 2023 ರಲ್ಲಿ ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಯಿತು ಎಂಬುದೂ ಗಮನಾರ್ಹ.