ರಷ್ಯಾದ ಮಾಸ್ಕೋದಿಂದ ದೆಹಲಿಗೆ ಬಂದಿಳಿದ ವಿಮಾನದಲ್ಲಿ ಬಾಂಬ್ ಇರುವುದಾಗಿ ತಡರಾತ್ರಿ ಎಚ್ಚರಿಕೆಯ ಇಮೇಲ್ ಬಂದಿದ್ದು, ಇದರಿಂದಾಗಿ ಒಟ್ಟು 386 ಹಾಗೂ 16 ಸಿಬ್ಬಂದಿಯನ್ನ ವಿಮಾನದಿಂದ ಕೆಳಗಿಳಿಸಿ ಪರಿಶೀಲಿಸಲಾಯಿತು. ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರೀ ಭದ್ರತೆ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. ಇಂತಹ ಘಟನೆ ನಡೆಯುತ್ತಿರುವುದು ಇದೇ ಮೊದಲೇನಲ್ಲ.