ರಷ್ಯಾ, ಜರ್ಮನಿ ಹಾಗೂ ಫ್ರಾನ್ಸಿನ ವಿಜ್ಞಾನಿಗಳು ಜಂಟಿಯಾಗಿ ಅಧ್ಯಯನ ನಡೆಸಿ ರಷ್ಯಾದ ಶೀತಲ ಮರುಭೂಮಿಯಾಗಿರುವ ಸೈಬೀರಿಯಾದ ಹಿಮದಡಿಯಲ್ಲಿ ಹೂತಿರುವ 24ಕ್ಕೂ ಹೆಚ್ಚು ವೈರಸ್‌ಗಳನ್ನು ಪತ್ತೆ ಹಚ್ಚಿದ್ದಾರೆ. ಇವುಗಳಲ್ಲಿ ಒಂದು ವೈರಸ್48,500 ವರ್ಷಗಳಿಂದಲೂ ಕೆರೆಯೊಂದರಲ್ಲಿ ಹೆಪ್ಪುಗಟ್ಟಿದೆ ಎನ್ನಲಾಗಿದೆ. ‘ಝೋಂಬಿ ವೈರಸ್’ ಎಂದು ಹೆಸರಿಸಲಾದ ಈ ಪುರಾತನ ವೈರಸ್‌ಗಳು ಸಹಸ್ರಾರು ವರ್ಷದಿಂದ ನೀರಿನಲ್ಲಿ ಹೆಪ್ಪುಗಟ್ಟಿದ್ದರೂ ಅವು ಇನ್ನೂ ಸಾಂಕ್ರಾಮಿಕವಾಗಿವೆ. ಎಂದರೆ ಇನ್ನೂ ರೋಗವನ್ನು ಹರಡುವ ಸಾಮರ್ಥ್ಯವನ್ನು ಉಳಿಸಿಕೊಂಡಿವೆ. ಹೀಗಾಗಿ ಇದು ಪ್ರಾಣಿಗಳು ಹಾಗೂ ಮನುಷ್ಯರಿಗೆ ಅಪಾಯ ತಂದೊಡ್ಡಬಹುದು ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ