ರಷ್ಯಾ ಸಾರ್ವಭೌಮತ್ವಕ್ಕೆ ಧಕ್ಕೆಯಾದರೆ ಎಲ್ಲಾ ಅಸ್ತ್ರಗಳನ್ನೂ ಬಳಸಲು ನಾವು ಸಿದ್ಧರಿದ್ದೇವೆ, ನಾನು ತಮಾಷೆ ಮಾಡುತ್ತಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಿನ್ನೆಯಷ್ಟೇ ಎಚ್ಚರಿಸಿದ್ದರು. ವಿಶ್ವದ ಎರಡನೇ ಮಹಾಯುದ್ಧದ ನಂತರ ಈಗ ಮತ್ತೊಮ್ಮೆ ಅಣ್ವಸ್ತ್ರ ದಾಳಿಯಾಗಬಹುದೆಂಬ ಭೀತಿಯಿಂದ ರಷ್ಯಾದ ಜನರು ಅಲ್ಲಿಂದ ಬೇರೆ ದೇಶಗಳಿಗೆ ಹೋಗುತ್ತಿದ್ದಾರೆ ಎಂದು ತಿಳಿದುಬಂದಿದ್ದು, ರಷ್ಯಾದಿಂದ ಬೇರೆ ದೇಶಗಳಿಗೆ ಹೋಗುವ ಒನ್‌ವೇ ಫ್ಲೈಟ್‌ಟಿಕೆಟ್‌ಗಳ ಮಾರಾಟ ಹೆಚ್ಚಾಗಿದೆ.