ಕಳೆದ 10 ತಿಂಗಳುಗಳಿಂದ ನಡೆಯುತ್ತಿರುವ ರಷ್ಯಾ ಹಾಗೂ ಉಕ್ರೇನ್ ಸಂಘರ್ಷವನ್ನು ಆದಷ್ಟು ಬೇಗ ಕೊನೆಗೊಳಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಇದಕ್ಕಾಗಿ ನಾವು ಶ್ರಮಿಸುತ್ತಿದ್ದೇವೆ. ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಯುದ್ಧ ಪ್ರಾರಂಭವಾದಾಗಿನಿಂದ ಮೊದಲ ಬಾರಿ ಅಮೆರಿಕಗೆ ಭೇಟಿ ನೀಡಿದ್ದಾರೆ. ಗುರುವಾರ ವಾಷಿಂಗ್ಟನ್‌ನಲ್ಲಿ ನಡೆದ ಗಣ್ಯರೊಂದಿಗಿನ ಭೇಟಿಯ ಬಳಿಕ ಅಮೆರಿಕ ಪೇಟ್ರಿಯಾಟ್ ಕ್ಷಿಪಣಿಯನ್ನು ಉಕ್ರೇನ್‌ಗೆ ನೀಡಿದೆ. ಪೇಟ್ರಿಯಾಟ್ ವಾಯು ರಕ್ಷಣಾ ವ್ಯವಸ್ಥೆ ಶಕ್ತಿಶಾಲಿ ಹಾಗೂ ಸುಧಾರಿತ ಎಂದು ಪರಿಗಣಿಸಲಾಗುತ್ತದೆ. ಅಮೆರಿಕ ಉಕ್ರೇನ್‌ಗೆ ನೀಡಿರುವ ಮಿಲಿಟರಿ ಸಹಾಯದಿಂದ ಯುದ್ಧವನ್ನು ನಿಲ್ಲಿಸಲು ಅಥವಾ ಮಾಸ್ಕೋ ತನ್ನ ಗುರಿಯನ್ನು ಸಾಧಿಸುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ರಷ್ಯಾ ಹೇಳಿದೆ.