ಸಿನಿಮಾರಂಗದಲ್ಲಿ ಅಗ್ರ ಸ್ಥಾನದಲ್ಲಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇತ್ತೀಚೆಗಷ್ಟೇ `ವಿಕ್ರಾಂತ್ ರೋಣ’ ಸಕ್ಸಸ್‌ನಲ್ಲಿದ್ದ ಸುದೀಪ್, ಬಿಗ್ ಬಾಸ್ ರಿಯಾಲಿಟಿ ಶೋ ನಿರೂಪಣೆ ಮುಗಿಸಿ ಸ್ವಲ್ಪ ಫ್ರಿ ಆಗಿದ್ದಾರೆ. ಈ ಬೆನ್ನಲ್ಲೇ ಸುದೀಪ್‌ಗೆ ರಾಜಕೀಯ ರಂಗಕ್ಕೆ ಎಂಟ್ರಿ ಕೊಡಿ ಎಂದು ನಟಿ ರಮ್ಯಾ ಮೂಲಕ ಕಾಂಗ್ರೆಸ್ ಪಕ್ಷದ ನಾಯಕರು ಮಣೆ ಹಾಕ್ತಿದ್ದಾರೆ. ಸುದೀಪ್ ಅವರನ್ನ ಕಾಂಗ್ರೆಸ್ ನಾಯಕರು ಈಗಾಗಲೇ ಸಂಪರ್ಕಿಸಿ ಒಂದು ಹಂತದ ಮಾತುಕತೆ ನಡೆಸಿದ್ದಾರೆ.ಆದರೆ ತಮ್ಮ ನಿರ್ಧಾರದ ಬಗ್ಗೆ ಯಾವುದೇ ಪ್ರತಿಕ್ರಿಯೆ ಸುದೀಪ್ ಕಡೆಯಿಂದ ಬಂದಿಲ್ಲ. ರಾಜಕೀಯ ಪ್ರವೇಶದ ಬಗ್ಗೆ ಸುದೀಪ್ ಕೂಡ ಮೌನ ವಹಿಸಿದ್ದಾರೆ.