ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗೋಲಿಯಾಕ್ಕೆ ಭೇಟಿ ನೀಡಿದರು. ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಅಧ್ಯಕ್ಷ ಎಚ್ಇಯು ಖುರೆಲ್ಸುಖ್ ರಾಜನಾಥ್ ಸಿಂಗ್ ಅವರಿಗೆ ಬಿಳಿ ಕುದುರೆಯನ್ನು ಉಡುಗೊರೆಯಾಗಿ ನೀಡಿದರು.ಈ ಬಗ್ಗೆ ರಾಜ್ನಾಥ್ಸಿಂಗ್ ಟ್ವೀಟ್ ಮಾಡಿದ್ದು, ಮಂಗೋಲಿಯಾದ ಸ್ನೇಹಿತರಿಂದ ವಿಶೇಷ ಉಡುಗೊರೆ ಬಂದಿದೆ. ಕುದುರೆಗೆ ತೇಜಸ್ ಎಂದು ಹೆಸರಿಡಲಾಗಿದೆ. ಇದನ್ನು ಉಡುಗೊರೆಯಾಗಿ ನೀಡಿದ ಮಂಗೋಲಿಯಾದ ಅಧ್ಯಕ್ಷ ಎಚ್ಇಯು ಖುರೆಲ್ಸುಖ್ಗೆ ಧನ್ಯವಾದ ತಿಳಿಸಿದರು. ರಾಜನಾಥ್ ಸಿಂಗ್ ಅವರು ಮಂಗೋಲಿಯಾ ದೇಶಕ್ಕೆ ಭೇಟಿ ನೀಡಿದ ಮೊದಲ ರಕ್ಷಣಾ ಸಚಿವರೆನಿಸಿಕೊಂಡಿದ್ದಾರೆ.