ರಾಜ್ಯದಲ್ಲಿ ಅಮುಲ್‌ಗೆ ಅವಕಾಶ ನೀಡಿದ್ದೇ ಕಾಂಗ್ರೆಸ್‌: ನಿರ್ಮಲಾ ಸೀತಾರಾಮನ್‌

ಜಯನಗರದಲ್ಲಿ ಭಾನುವಾರ ‘ಥಿಂಕ​ರ್‍ಸ್ ಫೋರಂ’ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ವಿತ್ತ ಸಚಿವ ನಿರ್ಮಲಾ ಸೀತಾರಾಮನ್‌ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ಅಮುಲ್‌ನಂದಿನಿಗೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಸುಳ್ಳು ಸುದ್ದಿ ಹರಡುತ್ತಿದೆ ಕಾಂಗ್ರೆಸ್‌ಸರ್ಕಾರ ಈ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗಲೇ ಗುಜರಾತ್‌ನ ‘ಅಮುಲ್‌’ ರಾಜ್ಯ ಪ್ರವೇಶಿಸಿತ್ತು. ಆದರೆ ಈಗ ಅಂದು ಮುಖ್ಯಮಂತ್ರಿಯಾಗಿದ್ದವರೇ ಈಗ ‘ನಂದಿನಿ’ ನಾಶಕ್ಕೆ ಅಮುಲ್‌ಗೆ ಬಿಜೆಪಿ ಅವಕಾಶ ನೀಡಿದೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಕೇಂದ್ರ ವಿತ್ತ ಸಚಿವ ನಿರ್ಮಲಾ ಸೀತಾರಾಮನ್‌ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.ದೇಶದಲ್ಲಿ ಪ್ರತಿಯೊಂದು ರಾಜ್ಯವೂ ಹಾಲಿನ ಒಕ್ಕೂಟವನ್ನು ಹೊಂದಿವೆ. ಕರ್ನಾಟಕದ ನಂದಿನಿ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ? ನಾನೂ ಇಲ್ಲಿಗೆ ಬಂದಾಗ ನಂದಿನಿ ಹಾಲು, ಮೊಸರು, ಪೇಡಾ ಬಳಸುತ್ತೇನೆ. ನಾನು ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದರೂ ದೆಹಲಿಯಲ್ಲಿ ನಂದಿನಿ ಸಿಗದಿದ್ದಕ್ಕೆ ಅಮುಲ್‌ಬಳಸುತ್ತಿದ್ದೇನೆ. ನಂದಿನಿ ಸಿಗದಿದ್ದರೆ ನಾನು ಹಾಲನ್ನೇ ಕುಡಿಯುವುದಿಲ್ಲ ಎಂದು ಹೇಳಲು ನಾನು ಸನ್ಯಾಸಿಯಲ್ಲ. ಅಮುಲ್‌ಖರೀದಿಸುತ್ತೇನೆ. ಇದು ಕರ್ನಾಟಕಕ್ಕೆ ವಿರುದ್ಧವಾದ ಕೆಲಸವಲ್ಲ ಎಂದು ವಿವರಿಸಿದರು.

Leave a Reply

Your email address will not be published. Required fields are marked *