ಚಿರತೆ ದಾಳಿಯಿಂದಾಗಿ ಮೈಸೂರಿನಲ್ಲಿ ನಿನ್ನೆ ಎರಡನೇ ಬಲಿಯಾಗಿತ್ತು. ಈ ಬೆನ್ನಲ್ಲೇ ಚಿರತೆ ಕುರಿತಾಗಿ ಗಂಭೀರವಾಗಿ ಪರಿಗಣಿಸಿರುವ ಸಿಎಂ ಬಸವರಾಜ ಬೊಮ್ಮಾಯಿ ಇಂದು ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿ, ಮೊದಲು ಚಿರತೆ ಹಾವಳಿ ಕಾಡುಪಕ್ಕದಲ್ಲಿ ಅಲ್ಲಲ್ಲಿತ್ತು. ಈಗ ಬೆಂಗಳೂರು ಅಕ್ಕ ಪಕ್ಕವೇ ಹಾವಳಿ ಆಗ್ತಿದೆ. ಚಿರತೆ ಹಾವಳಿಯನ್ನು ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದೇವೆ. ಚಿರತೆಯನ್ನು ಜೀವಂತ ಹಿಡಿದು ಅರಣ್ಯಕ್ಕೆ ಬಿಡುವಂತೆ ಸೂಚಿಸಿದ್ದೇವೆ. ಚಿರತೆ ದಾಳಿಯಿಂದ ಮೃತಪಟ್ಟವರಿಗೆ 15 ಲಕ್ಷ ರೂ. ಪರಿಹಾರ ನೀಡಲಾಗುವುದು. ಈ ಹಿಂದೆ ಆನೆ ದಾಳಿಯಿಂದ ಮೃತಪಟ್ಟವರಿಗೆ ನೀಡುತ್ತಿದ್ದಂತೆ ಪರಿಹಾರ ಇದೀಗ ಚಿರತೆ ದಾಳಿಯಿಂದ ಮೃತಪಟ್ಟವರಿಗೂ ನೀಡುತ್ತಿದ್ದೇವೆ ಎಂದಿದ್ದಾರೆ. ಇದನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಚಿರತೆ ಹಿಡಿಯಲು ಬೋನ್ ಇಟ್ಟು ಕಾಯಲಾಗುತ್ತಿದೆ. ವಿಶೇಷ ತಂಡ ರಚಿಸಿ ಬದ್ಧತೆಯಿಂದ ಕಾರ್ಯಾಚರಣೆ ನಡೆಸಲು ಸೂಚಿಸಿದ್ದೇನೆ.