ಬಿಎಫ್.7 ಕೊರೊನಾ ದೇಶಕ್ಕೆ ಕಾಲಿಡಬಹುದು ಅನ್ನೋ ಆತಂಕದ ಬೆನ್ನಲ್ಲೇ ಇದೀಗ ಬಿಬಿಎಂಪಿ ಜನರಿಗೆ ಕಿರಿಕಿರಿ ಮಾಡೋಕೆ ಹೊರಟಂತೆ ಕಾಣುತ್ತಿದೆ. ಕೊರೊನಾ ಟೆಸ್ಟ್ ಮಾಡದಿದ್ದರೂ ಸ್ವಾಬ್ ಟೆಸ್ಟ್ ಗೆ ಕೊಡದಿದ್ದರೂ ಮೊಬೈಲ್‍ಗೆ ಮೆಸೇಜ್‍ಗಳು ಬರೋಕೆ ಶುರುವಾಗಿದೆ. ಹೌದು. ಬೆಂಗಳೂರಿನ ಪ್ರಜ್ವಲ್ ಎಂಬವರ ಮೊಬೈಲ್‍ಗೆ ಮೆಸೇಜ್‍ವೊಂದು ಬಂದಿದ್ದು, ಕೊರೊನಾ ಟೆಸ್ಟ್ ರಿಪೋರ್ಟ್ ಬರುವವರೆಗೂ ಹೋಂ ಐಸೋಲೇಟ್ ಆಗುವಂತೆ ಸೂಚಿಸಲಾಗಿದೆ. ಆದರೆ ಸ್ವಾಬ್ ಟೆಸ್ಟ್ ಗೆ ಕೊಡದಿದ್ದರೂ ಮೆಸೇಜ್ ಬಂದಿದ್ದೇಗೆ ಪ್ರಜ್ವಲ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.