ರಾಜ್ಯದ ಜನತೆಗೆ ಈಗಾಗಲೇ ಶಕ್ತಿ ಯೋಜನೆ, ಅನ್ನಭಾಗ್ಯ, ಗೃಹ ಜ್ಯೋತಿ ಹಾಗೂ ಗೃಹ ಲಕ್ಷ್ಮೀ ಯೋಜನೆಯನ್ನ ಜಾರಿಗೊಳಿಸಿದ್ದು, ಯುವ ನಿಧಿ ಯೋಜನೆಯನ್ನ ಡಿಸೆಂಬರ್‌ಅಥವಾ ಜನವರಿಯಲ್ಲಿ ಜಾರಿಗೊಳಿಸಲು ಸರ್ಕಾರ ನಿರ್ಧಾರವನ್ನ ಕೈಗೊಂಡಿದೆ. ಇದರ ಜೊತೆಗೆ ರಾಜ್ಯದ ಜನತೆಗೆ ಮತ್ತೊಂದು ಗ್ಯಾರಂಟಿಗೆ ತಯಾರಿ ನಡೆದಿದ್ದು, ಆರೋಗ್ಯ ಇಲಾಖೆ ಪ್ಲಾನ್‌ಮಾಡಿಕೊಂಡಿದೆ.ರಾಜ್ಯ ಸರ್ಕಾರ ರಾಜ್ಯದ ಜನರ ಆರೋಗ್ಯದ ಹಿತದೃಷ್ಟಿಯಿಂದಾಗಿ ಆರನೇ ಗ್ಯಾರಂಟಿ ಜಾರಿಗೆ ಸಿದ್ದತೆ ನಡೆಸಿದ್ದಾರೆ ಎನ್ನಲಾಗಿದ್ದು, ಈ ಯೋಜನೆಗೆ ಗೃಹ ಆರೋಗ್ಯ ಯೋಜನೆ ಎಂದು ಹೆಸರಿಡಲಾಗಿದೆ. ಈಗಾಗಲೇ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಗೃಹ ಆರೋಗ್ಯ ಯೋಜನೆ ಜಾರಿ ತರಲು ಆರೋಗ್ಯ ಇಲಾಖೆ ಚಿಂತನೆ ನಡೆಸಿದ್ದು, ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸಿಗೋದು ಮಾತ್ರ ಬಾಕಿ ಇದೆ. ಇನ್ನೂ ಗೃಹ ಆರೋಗ್ಯ ಯೋಜನೆಗೆ ಕುರಿತು ಈಗಾಗಲೇ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಪ್ರಾಯೋಗಿಕವಾಗಿ 8 ಜಿಲ್ಲೆಗಳಲ್ಲಿ ಈ ಸೇವೆ ಆರಂಭ ಮಾಡಲು ಚಿಂತನೆ ಮಾಡಲಾಗಿದೆ.ಇತ್ತೀಚಿನ ದಿನಗಳಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿದ್ದು, ಜನರು ಈ ಆರೋಗ್ಯ ಸಮಸ್ಯೆಗಳನ್ನ ಸಾಮಾನ್ಯ ಎಂದು ನಿರ್ಲಕ್ಷ್ಯ ಮಾಡುತ್ತಾರೆ. ಪ್ರತಿ ಗ್ರಾಮೀಣ ಭಾಗದಲ್ಲೂ ಸಿಬ್ಬಂದಿಯನ್ನು ಮನೆ ಬಾಗಿಲಿಗೆ ಕಳುಹಿಸಿ ಆರೋಗ್ಯ ತಪಾಸಣೆ ಮಾಡುವ ಯೋಜನೆ ಇದಾಗಿದೆ. ಈ ಹಿಂದೆ ಪ್ರತಿ 5 ಸಾವಿರ ಜನರಿಗೆ ಆರೋಗ್ಯ ಇಲಾಖೆಯ ವತಿಯಿಂದ ಆರೋಗ್ಯ ಕ್ಷೇಮ ಕೇಂದ್ರ ಸ್ಥಾಪನೆ ಮಾಡಲಾಗಿತ್ತು. ಅದೇ ಆರೋಗ್ಯ ಕ್ಷೇಮ ಕೇಂದ್ರದಲ್ಲಿರುವ ಸಮುದಾಯ ಆರೋಗ್ಯ ಅಧಿಕಾರಿ ಆಶಾ ಕಾರ್ಯಕರ್ತೆಯರ ಜೊತೆ ಮನೆ ಮನೆ ಭೇಟಿ ಮಾಡುತ್ತಾರೆ. ಈ ಭೇಟಿಯ ವೇಳೆ ಡಯಾಬಿಟಿಸ್, ಬಿಪಿ, ಜ್ವರ, ಕ್ಯಾನ್ಸರ್‌ಸೇರಿದಂತೆ ಆರೋಗ್ಯ ಸಂಬಂಧಿತ ಕಾಯಿಲೆಗಳ ಬಗ್ಗೆ ಪರಿಶೀಲನೆ ನಡೆಯುತ್ತದೆ. ಈ ಕಾಯಿಲೆಗಳು ಇರುವುದು ಪತ್ತೆ ಆದರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರೋಗಿಗಳನ್ನು ಶಿಫಾರಸ್ಸು ಮಾಡಲಾಗುತ್ತದೆ