ವೋಟರ್ ಐಡಿ ಮಾಹಿತಿ ಸಂಗ್ರಹ ವಿಚಾರದಲ್ಲಿ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ, ಕಾಂಗ್ರೆಸ್ ಆರೋಪ ಹಾಸ್ಯಾಸ್ಪದ ಎಂದು ತಿರುಗೇಟು ಕೊಟ್ಟರು. ಇಂತಹ ವಿಚಾರದಲ್ಲಿ ಕಾಂಗ್ರೆಸ್ ದಿವಾಳಿ ಆಗಿದೆ ಚುನಾವಣೆ ಆಯೋಗ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೆ. ಅನೇಕ ವರ್ಷಗಳಿಂದ ಈ ಕೆಲಸ ಆಗುತ್ತಿದೆ. ಚುನಾವಣೆ ಆಯೋಗ ಮತ್ತು ಬಿಬಿಎಂಪಿ ಸೇರಿ ಕೆಲ NGOಗೆ ವಹಿಸುತ್ತವೆ. ಆ NGOಗೆ ಬಿಬಿಎಂಪಿ ಕೆಲಸ ಕೊಟ್ಟಿದೆ. ಆ NGO, BLO ಅಂತ ಮಾಹಿತಿ ಕಲೆ ಹಾಕಿದೆ ಎಂದು ಆರೋಪ ಇದೆ. ಆದರೆ ಬೇರೆ ಎಲ್ಲವೂ ಊಹಾಪೋಹದಲ್ಲಿ ಮಾಹಿತಿ ಲೀಕ್ ಆಗಿದೆ ಅಂತ ಹೇಳ್ತಿದ್ದಾರೆ. ಊಹಾಪೋಹಗಳ ಮೇಲೆ ದೊಡ್ಡ ಆರೋಪ ಕಾಂಗ್ರೆಸ್ ಮಾಡಿದೆ. ಇದೊಂದು ಹಾಸ್ಯಾಸ್ಪದ. ಕಾಂಗ್ರೆಸ್‌ಗೆ ಬೇರೆ ವಿಷಯ ಸಿಕ್ಕಿಲ್ಲ ಅಂತ ಇಂತಹ ಆರೋಪ ಮಾಡಿದೆ ಈ ವಿಚಾರ ಗೊತ್ತಾದ ಮೇಲೆ ಕೂಡಲೇ ತನಿಖೆಗೆ ಬಿಬಿಎಂಪಿಗೆ ಆದೇಶ ಮಾಡಿದ್ದೇನೆ. ಯಾರು ಯಾರು ಇದರ ಹಿಂದೆ ಇದ್ದಾರೆ, ಏನ್ ಮಾಹಿತಿ ಕಲೆ ಹಾಕಿದ್ದಾರೆ. ಏನ್ ಮಿಸ್ ಯೂಸ್ ಮಾಡಿದ್ದಾರೆ ಎಂದು ತನಿಖೆ ಮಾಡಲು ಸೂಚನೆ ನೀಡಿದ್ದೇನೆ. ಪೊಲೀಸ್ ದೂರು ಕೊಡಲು ಹೇಳಿದ್ದೇನೆ. ಎಂದು ಕಿಡಿಕಾರಿದರು.