ಇಂದು ನಗರದಲ್ಲಿ ನಡೆದ ಸರ್ವಪಕ್ಷಗಳ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ನ್ಯಾ.ನಾಗಮೋಹನ್‌ದಾಸ್ ವರದಿ ಅನುಷ್ಠಾನಕ್ಕೆ ಸರ್ಕಾರ ಒಪ್ಪಿದೆ. ನಾಳೆಯೇ ಸಂಪುಟ ಸಭೆ ಕರೆಯಲಾಗುವುದು. ಸರ್ಕಾರಿ ಮೀಸಲಾತಿ ಹೆಚ್ಚಳಕ್ಕೆ ನಾಳೆ ಅಧಿಕೃತ ಆದೇಶದ ಮುದ್ರೆ ಹಾಕಲಾಗುವುದು ಎಂದು ಸಿಎಂ ತಿಳಿಸಿದ್ದಾರೆ. ಈಗ ಇರುವ ಯಾವುದೇ ಮೀಸಲಾತಿ ಕಡಿಮೆ ಮಾಡಲ್ಲ. ಶೇ.50ಕ್ಕೂ ಮೇಲೆ ಮೀಸಲಾತಿ ಕೊಡುತ್ತೇವೆ. ಯಾವುದೇ ಜಾತಿಗೂ ಸಮಸ್ಯೆ ಆಗದಂತೆ, ಅನ್ಯಾಯ ಆಗದಂತೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತೆ ಸುಪ್ರೀಂ ಕೋರ್ಟ್ ಆದೇಶ ಬಂದ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಎಂದು ಭರವಸೆ ನೀಡಿದ್ದಾರೆ.