ಮಂಗಳವಾರ ದೆಹಲಿಯ ಸಂಸತ್‌ಭವನದಲ್ಲಿ ನರೇಂದ್ರ ಮೋದಿಯಯನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮತನಾಡಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಾದ ಕೃಷ್ಣ, ಕಾವೇರಿ ಹಾಗೂ ಮಹದಾಯಿಗಳಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ. ನ್ಯಾಯಾಧೀಕರಣಗಳಿಂದ ತೀರ್ಪು ಹೊರಬಿದ್ದರೂ ನೀರು ಬಳಕೆ ಮಾಡಿಕೊಳ್ಳಲು ಅಗುತ್ತಿಲ್ಲ. ಈ ಬಗ್ಗೆ ಸವಿವರವಾಗಿ ಪ್ರಧಾನಿಗಳಿಗೆ ವಿವರಿಸಿದ್ದೇನೆ.ನೀರಿನ ವ್ಯಾಜ್ಯಗಳು ಎಲ್ಲಾ ರಾಜ್ಯಗಳಲ್ಲೂ ಇವೆ. ಪ್ರಧಾನಿಯಾಗಿ ಈ ಜಾಗದಲ್ಲಿ ಕೂತು ತೀರ್ಮಾನಿಸುವುದು ಕಷ್ಟವಾಗುತ್ತಿದೆ. ಸಾಧ್ಯವಾದಷ್ಟುಪರಿಹಾರ ಮಾಡುತ್ತಿರುವುದಾಗಿ ಮೋದಿ ಉತ್ತರ ಕೊಟ್ಟರು.ಹಾಸನ ಏರ್‌ಪೋರ್ಟ್‌ವಿಚಾರವನ್ನು ಪ್ರಸ್ತಾಪ ಮಾಡಿದ್ದೇನೆ. ಏರ್‌ಪೋರ್ಟ್‌ಗೆ ಯಡಿಯೂರಪ್ಪ ಅಡ್ಡಗಾಲು ಹಾಕುತ್ತಿದ್ದರು, ಸಣ್ಣ ಸಹಾಯವನ್ನೂ ಮಾಡಲಿಲ್ಲ. ಏನೇ ಆದ್ರೂ ಏರ್‌ಪೋರ್ಟ್‌ಕೆಲಸ ಮಾಡಲಿಲ್ಲ. ಹಾಗಾಗಿ ನೀವೇ ತೀರ್ಮಾನ ಮಾಡಿ ಎಂದು ಪ್ರಧಾನಿ ಮೋದಿಯವರಿಗೆ ಹೇಳಿರುವುದಾಗಿ ತಿಳಿಸಿದರು.