ರಾಷ್ಟ್ರಧ್ವಜ ಮಾರಾಟ ವಾಹನಕ್ಕೆ ಚಾಲನೆ: ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್

ಸ್ವಾತಂತ್ರ್ಯೋತ್ಸವ ‘ಅಮೃತ ಮಹೋತ್ಸವ’ ಅಂಗವಾಗಿ ಬೆಂಗಳೂರಿನ ಯಲಹಂಕ ವಲಯ ವ್ಯಾಪ್ತಿಯಲ್ಲಿ ಆಯೋಜಿಸಿದ್ದ “ಹರ್ ಘರ್ ತಿರಂಗಾ” ಅಭಿಯಾನ ಮತ್ತು ಸಂಚಾರಿ ರಾಷ್ಟ್ರಧ್ವಜ ಮಾರಾಟ ಕೇಂದ್ರಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ತುಷಾರ್ ಗಿರಿನಾಥ್, 75ನೇ ಸ್ವಾತಂತ್ರ್ಯ ದಿನೋತ್ಸವಕ್ಕೆ ದಿನಗಣನೆ ಶುರುವಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯ, ದೇಶಾದ್ಯಂತ ಅಮೃತ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಸಂಭಂಧ ನಡೆಸಿರುವ ಮನೆ ಮನೆಗಳಲ್ಲಿ ತ್ರಿವರ್ಣ ಧ್ವಜ ಹಾರಬೇಕು ಅಭಿಯಾನದಡಿ ಬೆಂಳೂರಿನ ವಿಧಾನಸೌಧ, ಎಂ.ಎಸ್ ಬಿಲ್ಡಿಂಗ್, ವಿವಿ ಟವರ್ ಸೇರಿದಂತೆ ನಗರದ ಪ್ರಮುಖ ಸ್ಥಳಗಳಲ್ಲಿ ರಾಷ್ಟ್ರ ಧ್ವಜಗಳನ್ನು ಮಾರಾಟ ಮಾಡಲು ವ್ಯವಸ್ಥೆ ಮಾಡಲಾದ ‘ಬಿಬಿಎಂಪಿ ಧ್ವಜ ಮಾರಾಟ ಮೊಬೈಲ್ ಕೇಂದ್ರ’ ಸ್ಥಾಪಿಸಿದೆ. ಇಲ್ಲಿ ಅಭಿಯಾನದಲ್ಲಿ ಪಾಲ್ಗೊಳ್ಳುವ ನಗರವಾಸಿಗಳಿಗೆ ತ್ರಿವರ್ಣ ಧ್ವಜ ಖರೀದಿಸಲು ಅವಕಾಶ ನೀಡಲಾಗಿದೆ ಎಂದು ಅವರು ಹೇಳಿದರು.

Leave a Reply

Your email address will not be published. Required fields are marked *