ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಉಂಟಾಗುವಷ್ಟು ವಾಯು ಮಾಲಿನ್ಯ ಇನ್ನಿತರ ಮಹಾನಗರಗಳಲ್ಲಿ ಕಂಡು ಬರುವುದಿಲ್ಲ. ಆ ಮಟ್ಟಿನ ಗಾಳಿ ದೆಹಲಿಯಲ್ಲಿ ಕಲುಷಿತಗೊಳ್ಳುತ್ತಿದೆ. ಹೀಗೆ ಮುಂದುವರಿದರೆ ಅನಾರೋಗ್ಯ ಸೇರಿದಂತೆ ಭವಿಷ್ಯದಲ್ಲಿ ಸಾಕಷ್ಟು ತೊಂದರೆ ಸೃಷ್ಟಿ ಸಾಧ್ಯತೆ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಈ ಬಾರಿಯು ಎಲ್ಲ ವಿಧದ ಪಟಾಕಿಗಳ ಮೇಲೆ ಮತ್ತೆ ನಿಷೇಧ ಹೇರಿದೆ.ಇನ್ನೊಂದು ವಾರದಲ್ಲಿ ಗಣೇಶ, ದೀಪಾವಳಿ ಸೇರಿದಂತೆ ಸಾಲು ಸಾಲು ಹಬ್ಬಗಳು ಎದುರಾಗುತ್ತವೆ. ಈ ವೇಳೆ ಪಟಾಕಿ ಹೊಡೆಯುವುದಿರಂದ ನವದೆಹಲಿಯಲ್ಲಿ ನಿಯಂತ್ರಣಕ್ಕೆ ಬರುತ್ತಿರುವ ಗಾಳಿಯ ಗುಣಮಟ್ಟ ಮತ್ತಷ್ಟು ಹದಗೆಡುವ ಸಾಧ್ಯತೆ ಇರುತ್ತದೆ. ಈ ಸಂಬಂಧ ಪಟಾಕಿಯ ಸದ್ದಿನಿಂದಲೇ ಆಚರಣೆಯಾಗುತ್ತಿದ್ದ ಮಹಾ ಹಬ್ಬ ದೀಪಾವಳಿಗೆ ಪಟಾಕಿಗಳನ್ನು ಬ್ಯಾನ್ ಮಾಡಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರ ಆದೇಶ ಹೊರಡಿಸಿದೆ.