ಕಾಂಗ್ರೆಸ್‌ತನ್ನ ಅಭ್ಯರ್ಥಿಗಳಿಗೆ ಬಿ ಫಾರಂ ವಿತರಣೆ ಮಾಡಲು ಆರಂಭಿಸಿದೆ. ಮಧ್ಯಾಹ್ನ 1:30 ರಿಂದ 3 ಗಂಟೆಯವರೆಗೆ ರಾಹುಕಾಲವಿತ್ತು. ರಾಹುಕಾಲ ಮುಕ್ತಾಯವಾದ ಬಳಿಕ ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ಡಿಕೆ ಶಿವಕುಮಾರ್‌ಅವರು ಅಭ್ಯರ್ಥಿಗಳಿಗೆ ಟಿಕೆಟ್‌ಹಂಚಿಕೆ ಮಾಡಲು ಆರಂಭಿಸಿದರು.ಮೊದಲ ಬಿ ಫಾರಂ ಅನ್ನು ಹೆಬ್ಬಾಳ ಕ್ಷೇತ್ರದ ಅಭ್ಯರ್ಥಿ ಭೈರತಿ ಸುರೇಶ್‌ಗೆ ನೀಡಲಾಯಿತು. ಎರಡನೇ ಬಿ ಫಾರಂ ಅನ್ನು ರಾಜರಾಜೇಶ್ವರಿ ನಗರದ ಅಭ್ಯರ್ಥಿ ಕುಸುಮಾ ನೀಡಲಾಯಿತು 224 ಕ್ಷೇತ್ರಗಳ ಪೈಕಿ ಕಾಂಗ್ರೆಸ್165 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇನ್ನೂ 58 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಬೇಕಿದೆ.